100 ಕಿ.ಮೀ ಗೂ ಅಧಿಕ ನಡೆದು ಹರ್ಯಾಣದ ಅಂಬಾಲಾದಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕನ ಪತ್ನಿ, ಮಗು ಸಾವು

ಪಂಜಾಬ್ ನ ಲುಧಿಯಾನಾದಿಂದ 100 ಕಿಲೋ ಮೀಟರ್ ಗೂ ಅಧಿಕ ದೂರ ನಡೆದುಕೊಂಡು ಹೋಗಿ ವಲಸೆ ಕಾರ್ಮಿಕರೊಬ್ಬರ ಪತ್ನಿ ಹರ್ಯಾಣದ ಅಂಬಾಲಾ ತಲುಪಿದಾಗ ಹೆರಿಗೆಯಾಗಿ ಮಗು ಮೃತಪಟ್ಟ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಂಬಾಲಾ:ಪಂಜಾಬ್ ನ ಲುಧಿಯಾನಾದಿಂದ 100 ಕಿಲೋ ಮೀಟರ್ ಗೂ ಅಧಿಕ ದೂರ ನಡೆದುಕೊಂಡು ಹೋಗಿ ವಲಸೆ ಕಾರ್ಮಿಕರೊಬ್ಬರ ಪತ್ನಿ ಹರ್ಯಾಣದ ಅಂಬಾಲಾ ತಲುಪಿದಾಗ ಹೆರಿಗೆಯಾಗಿ ಮಗು ಮೃತಪಟ್ಟ ಘಟನೆ ನಡೆದಿದೆ.

ಪಂಜಾಬ್ ನ ಲುಧಿಯಾನಾದಿಂದ ಕಳೆದ ವಾರ ಬಿಹಾರದ ತಮ್ಮ ಗ್ರಾಮಕ್ಕೆ ಹೋಗಲು ಕಾಲ್ನಡಿಗೆಯಲ್ಲಿಯೇ ಹೊರಟಿದ್ದ ಬಿಂದಿಯಾ ಮತ್ತು ಆಕೆಯ ಪತಿ ಜಟಿನ್ ರಾಮ್ ಕಳೆದ ಬುಧವಾರ ಅಂಬಾಲಾ ತಲುಪಿದರು. ಅಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಕ್ಷಣವೇ ಮಗು ಅಸುನೀಗಿದೆ.

ಮಗುವಿನ ಅಂತಿಮ ಕ್ರಿಯೆಯನ್ನು ಈ ದಂಪತಿ ಅಂಬಾಲಾದಲ್ಲಿಯೇ ನಡೆಸಿದರು. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಇದು ಮೊದಲ ಮಗು. ಕಳೆದ ವರ್ಷ ಬಿಹಾರದಿಂದ ಲುಧಿಯಾನಾಕ್ಕೆ ಬಂದಿದ್ದ ದಂಪತಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com