ಇದ್ದಕ್ಕಿದ್ದಂತೆ ಲಾಕ್‌ ಡೌನ್ ಹೇರುವುದು, ಒಂದೇ ಬಾರಿಗೆ ತೆರವುಗೊಳಿಸುವುದು ತಪ್ಪು- ಉದ್ಧವ್ ಠಾಕ್ರೆ 

ಇದಕ್ಕಿದ್ದಂತೆ ಲಾಕ್ ಡೌನ್ ಹೇರುವುದು, ಒಂದೇ ಬಾರಿಗೆ ಅದನ್ನು ತೆರವುಗೊಳಿಸುವುದು ತಪ್ಪು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಮುಂಬೈ: ಇದಕ್ಕಿದ್ದಂತೆ ಲಾಕ್ ಡೌನ್ ಹೇರುವುದು, ಒಂದೇ ಬಾರಿಗೆ ಅದನ್ನು ತೆರವುಗೊಳಿಸುವುದು ತಪ್ಪು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆ ಮುಂಬರುವ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

ಇದ್ದಕ್ಕಿದ್ದಂತೆ ಲಾಕ್ ಡೌನ್ ಹೇರುವುದು ತಪ್ಪು, ಅದನ್ನು ಒಂದೇ ಬಾರಿಗೆ ತೆರವುಗೊಳಿಸುವುದು ಅಷ್ಟೇ ತಪ್ಪು, ಇದು ನಮ್ಮ ರಾಜ್ಯದ ಜನತೆಗೆ ಅಹಿತಕರವಾಗಿಲ್ಲ ಎಂದು ಠಾಕ್ರೆ ವಿಡಿಯೋ ಸಂದೇಶ ನೀಡಿದ್ದಾರೆ.

ಕೊರೋನಾವೈರಸ್ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರು.ನಂತರ ಅದನ್ನು ವಿಸ್ತರಣೆಗೊಳಿಸಿದ್ದರು.  ಪ್ರಸ್ತುತ ಮೇ 31ರವರೆಗೂ ಕೆಲ ನಿರ್ಬಂಧದೊಂದಿಗೆ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. 

ಮಹಾರಾಷ್ಟ್ರ ಸರ್ಕಾರ ಕೇಂದ್ರಸರ್ಕಾರದಿಂದ  ಜಿಎಸ್ ಟಿಯಲ್ಲಿ ಪಾಲು ಸ್ವಿಕರಿಸಿಲ್ಲ, ವಲಸೆ ಕಾರ್ಮಿಕರಿಗಾಗಿ ನೀಡಲಾಗುತ್ತಿರುವ ಪ್ರಯಾಣಿಕರ ವೆಚ್ಚದಲ್ಲಿ ಪಾಲನ್ನು ಸಹ ಪಡೆದಿಲ್ಲ, ರಾಜ್ಯದಲ್ಲಿ ಕೆಲ ಔಷಧಿಗಳ ಕೊರತೆಯಿದೆ. ಇದಕ್ಕೂ ಮುಂಚೆ ಪಿಪಿಇ ಕಿಟ್ ಗಳು ಮತ್ತಿತರ ಸಲಕರಣೆಗಳ ಕೊರೆತೆ ಇತ್ತು ಎಂಬುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com