2 ತಿಂಗಳ ಬಳಿಕ ದೇಶಿ ವಿಮಾನಗಳ ಹಾರಾಟ ಆರಂಭ: ಪ್ರಯಾಣಕ್ಕೆ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಕೊರೋನಾ ವೈರಸ್ ತಡೆಗೆ ವಿಧಿಸಲಾಗಿದ್ದ ದೀರ್ಘಾವಧಿಯ ಲಾಕ್ ಡೌನ್ ನಂತರ ದೇಶಿಯ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದ್ದು, ಮೇ 25 ರಿಂದ ವಿಮಾನಗಳು ಪುನಃ ಕಾರ್ಯಾರಂಭ ಮಾಡಲಿವೆ.
ದೇಶಿ ವಿಮಾನಗಳಾ ಹಾರಾಟ ಆರಂಭ: ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ
ದೇಶಿ ವಿಮಾನಗಳಾ ಹಾರಾಟ ಆರಂಭ: ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ

ನವದೆಹಲಿ: ಕೊರೋನಾ ವೈರಸ್ ತಡೆಗೆ ವಿಧಿಸಲಾಗಿದ್ದ ದೀರ್ಘಾವಧಿಯ ಲಾಕ್ ಡೌನ್ ನಂತರ ದೇಶಿಯ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದ್ದು, ಮೇ 25 ರಿಂದ ವಿಮಾನಗಳು ಪುನಃ ಕಾರ್ಯಾರಂಭ ಮಾಡಲಿವೆ.

ವಿಮಾನಗಳಾ ಕಾರ್ಯಾರಂಭಕ್ಕೂ ಮುನ್ನ ಸರ್ಕಾರ ಮತ್ತೊಮ್ಮೆ ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು,ಕೊರೋನಾ ರೋಗಲಕ್ಷಣಗಳು ಇಲ್ಲದವರು ಮಾತ್ರ ವಿಮಾನಗಳಲ್ಲಿ ಪ್ರಯಾಣ ಮಾಡಬಹುದಾಗಿದೆ, ಒಂದು ವೇಳೆ ಪ್ರಯಾಣದ ನಂತರ ರೋಗಲಕ್ಷಣಗಳು ಕಾಣಿಸಿಕೊಂಡರೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಮ್ಮ ಪ್ರಯಾಣದ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದೆ. 

ಇನ್ನು ವಿದೇಶದಿಂದ ಭಾರತಕ್ಕೆ ವಿಮಾನದಲ್ಲಿ ಬರುವವರಿಗೂ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಯಾಣದ ನಂತರ, ಕಡ್ಡಾಯವಾಗಿ 14 ದಿನಗಳ ಕಾಲ ತಮ್ಮದೇ ಖರ್ಚಿನಲ್ಲಿ ಕ್ವಾರಂಟೇನ್, ನಂತರ 7 ದಿನಗಳ ಕಾಲ ಮನೆಯಲ್ಲಿಯೇ ಐಸೊಲೇಷನ್ ನಲ್ಲಿರುತ್ತೇವೆ ಎಂಬ ನಿಯಮಗಳಿಗೆ ಬದ್ಧರಾಗಿರುತ್ತೇವೆ ಎಂದು ಭಾರತಕ್ಕೆ ತೆರಳುವ ವಿಮಾನ ಹತ್ತುವ ಮುನ್ನ ಸಹಿ ಮಾಡಬೇಕಾಗುತ್ತದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com