ದುಬೈಯಲ್ಲಿ ಕೆಲಸ ತೊರೆದು ತಾಯಿ ನೋಡಿಕೊಳ್ಳಲು ಬಂದ, ಕ್ವಾರಂಟೈನ್ ನಲ್ಲಿದ್ದಾಗ ಬಂತು ಹೆತ್ತವಳ ಸಾವಿನ ಸುದ್ದಿ!

ದುಬೈಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸ ತೊರೆದು ಭಾರತದಲ್ಲಿದ್ದ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ತವರಿಗೆ ಬಂದಿದ್ದಾರೆ. ಆದರೆ ಕೆಲವು ಬಾರಿ ಜೀವನ ನಾವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಕೊವಿಡ್-19 ಪರಿಣಾಮ ದೆಹಲಿಯಲ್ಲಿ 14 ದಿನ ಕ್ವಾರಂಟೈನ್ ಗೆ ಒಳಗಾಗಿದ್ದು, ಕ್ವಾರಂಟೈನ್ ಮುಗಿಯುವ ಮೊದಲೇ ತಾಯಿಯ ಸಾವಿನ ಸುದ್ದಿ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದುಬೈಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸ ತೊರೆದು ಭಾರತದಲ್ಲಿದ್ದ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ತವರಿಗೆ ಬಂದಿದ್ದಾರೆ. ಆದರೆ ಕೆಲವು ಬಾರಿ ಜೀವನ ನಾವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಕೊವಿಡ್-19 ಪರಿಣಾಮ ದೆಹಲಿಯಲ್ಲಿ 14 ದಿನ ಕ್ವಾರಂಟೈನ್ ಗೆ ಒಳಗಾಗಿದ್ದು, ಕ್ವಾರಂಟೈನ್ ಮುಗಿಯುವ ಮೊದಲೇ ತಾಯಿಯ ಸಾವಿನ ಸುದ್ದಿ ಬಂದಿದೆ.

ಕಳೆದ ಶನಿವಾರ ತಾಯಿಯ ಸಾವಿನ ಸುದ್ದಿಯಿಂದ ತೀವ್ರ ಆಘಾತಕ್ಕೆ ಒಳಗಾದ ಆಮೀರ್ ಖಾನ್, ಭಾನುವಾರ ರಾಂಪುರ್ ದಲ್ಲಿ ನಡೆದ ತಾಯಿಯ ಅಂತ್ಯಕ್ರಿಯೆಯಲ್ಲೂ ಭಾಗವಹಿಸಲು ಸಾಧ್ಯವಾಗಿಲ್ಲ. ಅಮೀರ್ ಕ್ವಾರಂಟೈನ್ ಶೀಘ್ರದಲ್ಲೇ ಮುಗಿಯಲಿದೆ. ಆದರೂ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಆತನಿಗೆ ಅವಕಾಶ ನೀಡಿಲ್ಲ.

ಆರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದ 30 ವರ್ಷದ ಆಮೀರ್, ಅಲ್ಲಿ ಉತ್ಪನ್ನ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಮೇ 13 ರಂದು ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ ತಾಯಿನೋಡಿಕೊಳ್ಳುವುದಕ್ಕಾಗಿ ಭಾರತಕ್ಕೆ ಬಂದಿದ್ದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

ಭಾನುವಾರವಷ್ಟೇ ಕೇಂದ್ರ ಸರ್ಕಾರ ವಿದೇಶಗಳಿಂದ ಬರುವ ಪ್ರಯಾಣಿಕರ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದ್ದು, ಸಂಕಷ್ಟದಲ್ಲಿರುವವರಿಗೆ, ಗರ್ಭಿಣಿಯರಿಗೆ, ಕುಟುಂಬದಲ್ಲಿ ಸಾವು, ಗಂಭೀರ ಅನಾರೋಗ್ಯ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅವರ ಪೋಷಕರು ಮುಂತಾದ ಬಲವಾದ ಕಾರಣಗಳಿದ್ದರೆ 14 ದಿನಗಳ ಹೋಮ್ ಕ್ವಾರಂಟೈನ್ ಗೆ ಅನುಮತಿ ನೀಡಲಾಗಿದೆ. ಈ ಕುರಿತ ಮಾಧ್ಯಮಗಳ ವರದಿಯನ್ನು ನಾನು ಅಧಿಕಾರಿಗಳಿಗೆ ತೋರಿಸಿದೆ. ಆದರೆ ಯಾವುದೇ ಪ್ರಯೋಜನೆ ಆಗಲಿಲ್ಲ. ನಾನು ಕೊವಿಡ್-19 ಪರೀಕ್ಷೆಗೂ ಸಿದ್ಧವಾಗಿದ್ದೆ. ಆದರೂ ನನ್ನ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ನನಗೆ ಅನುಮತಿ ನೀಡಲಿಲ್ಲ ಎಂದು ಆಮೀರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com