ತಿಹಾರ ಜೈಲಿನಲ್ಲಿ ಮೊದಲ ಕೊರೋನಾ ಕೇಸ್; ಜೈಲು ಅಧಿಕಾರಿಗೆ ಕೊರೋನಾ ಪಾಸಿಟಿವ್

ತಿಹಾರ ಜೈಲಿನ 45 ವರ್ಷದ ಅಸಿಸ್ಟೆಂಟ್ ಸೂಪರಿಂಟೆಂಡ್ ಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.ಈ ಮೂಲಕ ತಿಹಾರ್ ಜೈಲಿನಲ್ಲಿ ಇದೇ ಮೊದಲ ಕೊರೋನಾ ಪ್ರಕರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಿಹಾರ ಜೈಲಿನ 45 ವರ್ಷದ ಅಸಿಸ್ಟೆಂಟ್ ಸೂಪರಿಂಟೆಂಡ್ ಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.ಈ ಮೂಲಕ ತಿಹಾರ್ ಜೈಲಿನಲ್ಲಿ ಇದೇ ಮೊದಲ ಕೊರೋನಾ ಪ್ರಕರಣವಾಗಿದೆ.

ತಿಹಾರ್ ಜೈಲಿನ ವಸತಿ ಸಮುಚ್ಚಯದ ನಿವಾಸಿಯಾರುವ ಅಧಿಕಾರಿನ್ನು ಸೆಂಟ್ರಲ್ ಜೈಲ್ ಸಂಖ್ಯೆ 7 ಕ್ಕೆ ಪೋಸ್ಟಿಂಗ್ ಮಾಡಲಾಗಿತ್ತು. ಈ ಅಧಿಕಾರಿ ಶುಕ್ರವಾರ ಮನೆಗೆ ತೆರಳಲು ರಜೆ ಕೋರಿದ್ದರು. ಆ ವೇಳೆ ಅವರಿಗೆ ಯಾವುದೇ ಲಕ್ಷಣಗಳಿರಲಿಲ್ಲ, ಆದರೆ ತೆರಳುವ ಮುನ್ನ ಅವರಿಗೆ ಕರೊನೋ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿದೆ ಎಂದು  ಕಾರಾಗೃಹ ಇಲಾಖೆಯ ಡಿಜಿಪಿ ಸಂದೀಪ್ ಗೋಯೆಲ್ ತಿಳಿಸಿದ್ದಾರೆ,

ಅಧಿಕಾರಿಗೆ ಸೋಂಕು ಹೇಗೆ ಬಂತು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಸೋಂಕಿತ ಸಿಬ್ಬಂದಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸದ್ಯ ಅಧಿಕಾರಿಯನ್ನು ಹೋಮ್ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.

ಇನ್ನೂ ಸೋಂಕಿತ ಅಧಿಕಾರಿಯ ಸಂಪರ್ಕದಲ್ಲಿದ್ದ  ಐದು ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.ಮೂವರು ಖೈದಿಗಳನ್ನು ಪ್ರತ್ಯೇಕ ಶೆಲ್ ನಲ್ಲಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com