ಹೆಂಡತಿಯನ್ನು ಕೊಲ್ಲಲು ಹಾವುಗಳನ್ನು ಖರೀದಿಸಿದ ಪತಿ, ಪೋಲೀಸ್ ತನಿಖೆಯಿಂದ ಬಯಲಾಯ್ತು ಭಯಾನಕ ಸತ್ಯ!

ಪತ್ನಿಯನ್ನು ಕೊಂದು ಹಾವು ಕಚ್ಚಿ ಸತ್ತಳೆಂದು ಕಥೆ ಹೆಣೆದಿದ್ದ ಪತಿರಾಯನನ್ನು ಪೋಲೀಸರು ಜೈಲಿಗಟ್ಟಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲ್ಲಂ : ಪತ್ನಿಯನ್ನು ಕೊಂದು ಹಾವು ಕಚ್ಚಿ ಸತ್ತಳೆಂದು ಕಥೆ ಹೆಣೆದಿದ್ದ ಪತಿರಾಯನನ್ನು ಪೋಲೀಸರು ಜೈಲಿಗಟ್ಟಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. 

ಅಡೂರ್ ಮೂಲದ ಸೂರಜ್ (27) ಎಂಬಾತ ಪತ್ನಿಯನ್ನು ಕೊಲ್ಲಲಿಕ್ಕಾಗಿ ಹಾವುಗಳನ್ನು ಖರೀದಿಸಿದ್ದ. ಆಕೆ ಹಾವಿನ ಕಡಿತದಿಂದ ಸಾವನ್ನಪ್ಪಿರುವುದಾಗಿ ಪೋಲೀಸರು ಹೇಳಿದ್ದಾರೆ. ಸೂರಜ್ ತನ್ನ ಪತ್ನಿ ಉತ್ತರಾ (25) ರನ್ನು ಕೊಂದು ಅವಳ ಬಳಿಯಿದ್ದ  ಚಿನ್ನದ ಒಡವೆಗಳನ್ನು ದೋಚಿ ಬಳಿಕ ಇನ್ನೊಬ್ಬಳನ್ನು ವಿವಾಹವಾಗಲು ಯೋಜಿಸಿದ್ದ ಎಂದು ಹೇಳಲಾಗಿದ್ದು ಸೂರಜ್ ಮಾತ್ರ ಇಡೀ ಘಟನೆಯನ್ನು ಆಕಸ್ಮಿಕ ಸಾವೆಂದು ನಂಬಿಸಲು ಪ್ರಯತ್ನಿಸಿದ್ದ.

ಮೊದಲು ಉತ್ತರಾಗೆ ವಿಷಕಾರಿ ಹಾವಿನಿಂದ ಮಾರ್ಚ್ 2 ರಂದು ತನ್ನ ಮನೆಯಲ್ಲೇ ಕಚ್ಚಿಸಿ ಹತ್ಯೆ ಮಾಡಲು ಯತ್ನಿಸಿದ್ದ ಸೂರಜ್ ಬಳಿಕ ಒಂದು ವಾರದೊಳಗೆ ನಾಗರಹಾವಿನಿಂದ ಕಚ್ಚಸಿ ಕೊಲೆ ಮಾಡಿದ್ದಾನೆ.ಎರಡನೇ ಘಟನೆ ನಡೆಯುವ ವೇಳೆ ಆಕೆ ಮೊದಲ ಬಾರಿಯ ಹಾವಿನ ಕಡಿತದಿಂದ ಚೇತರಿಸಿಕೊಳ್ಳುತ್ತಿದ್ದಳು.

ಪ್ರಕಾರ, ಮೇ 7 ರಂದು ಸೂರಜ್ ಹಾಜರಿದ್ದಂತೆ ಉತ್ತರಾ ಅವರ ಪೋಷಕರು ತಮ್ಮ ಪುತ್ರಿ ಹಾವಿನ ಕಡಿತದಿಂದ ಸಾವನ್ನಪ್ಪಿದ್ದಾಳೆ ಎನ್ನುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಮುನ್ನ ಅವರು ಮಾರ್ಚ್ 2 ರಂದು ಬ್ಯಾಂಕ್ ಲಾಕರ್‌ನಿಂದ ಉತ್ತರಾಗೆ ಸೇರಿದ್ದ ಚಿನ್ನವನ್ನು ಹಿಂಪಡೆದಿದ್ದರು.

ಉತ್ತರಾಗೆ ಎರಡನೇ ಬಾರಿ ನಾಗರಹಾವು ಕಡಿಯುವ ವೇಳೆ ಆಕೆ ಹಂಚಿನ ಹೊದಿಕೆಯಿದ್ದ ಮುಚ್ಚಿದ ಕೋಣೆಯಲ್ಲಿದ್ದಳು. ಪೊಲೀಸರಿಗೆ ನೀಡಿದ ದೂರಿನಲ್ಲಿ, ಹಾವು ಕೋಣೆಗೆ ಪ್ರವೇಶಿಸುವುದು ಅಸಾಧ್ಯ ಎಂದು ಆಕೆಯ ಪೋಷಕರು ಹೇಳಿದ್ದಾರೆ. ಸೂರಜ್ ಹಾವನ್ನು ಒಳಗೆ ಬಿಟ್ಟು ಕಚ್ಚುವಂತೆ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ. ಅವರು ವರದಕ್ಷಿಣೆಗಾಗಿ ಸೂರಜ್ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾರೆ

ಪ್ರಕರಣದ ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ವಿವರಗಳು ಬಹಿರಂಗಗೊಂಡಿವೆ. ಆ ವ್ಯಕ್ತಿಯು ತನ್ನ ಹೆಂಡತಿಯನ್ನು ಕೊಲ್ಲಲು ಹಾವು ಆಡಿಸುವವನ ಸಹಾಯ ಪಡೆದಿದ್ದ. ಸೂರಜ್ ಅವರ ಕರೆ ದಾಖಲೆಗಳು ಅವರು ಹಾವು ಆಡಿಸುವವನ ಜತೆ ಸಂಪರ್ಕದಲ್ಲಿರುವುದು ಪತ್ತೆ ಮಾಡಿಸಿದೆ.  ಗಂಡನ ಆನ್‌ಲೈನ್ ಚಟುವಟಿಕೆ ಹಾವಾಡಿಗರ  ಕುರಿತು ಅವರು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದದ್ದನ್ನು ಪತ್ನಿ ಉತ್ತರಾ ಕೂಡ ಗಮನಿಸಿದ್ದಳು.ಮೂರು ತಿಂಗಳಿನಿಂದ ಆತ ಉತ್ತರಾಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದಿದೆ. 

ತನ್ನ ಹೆಂಡತಿಯನ್ನು ಕೊಲ್ಲುವ ಮೊದಲ ಪ್ರಯತ್ನ ವಿಫಲವಾದ ನಂತರ ಸೂರಜ್ ಏಪ್ರಿಲ್ 24 ರಂದು ನಾಗರಹಾವು ಖರೀದಿಸಿ ಅದನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. ಎರಡೂ ಹಾವುಗಳನ್ನು ತಲಾ 5,000 ರೂ.ಗೆ ಖರೀದಿಸಲಾಗಿದೆ. 

ಮೇ 7 ರಂದು, ಅವರು ಉತ್ತರಾಳ ಮನೆಗೆ ತೆರಳಿದ್ದಾರೆ. , ನಾಗರಹಾವನ್ನು ಬಾಟಲಿಯಲ್ಲಿ ಮರೆಮಾಡಿ ಆಕೆ ಮಲಗಿದ್ದಾಗ ಹಾವನ್ನು ತನ್ನ ಹೆಂಡತಿಯ ಮೇಲೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ, ಉತ್ತರಾಳ ಪೋಷಕರು ಮಗಳು  ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು,  ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವಳು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com