ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ, ಬ್ರೆಜಿಲ್ ನೌಕಾಪಡೆ ಅಧಿಕಾರಿಗೆ ವಿಶ್ವಸಂಸ್ಥೆ ಮಿಲಿಟರಿ ಪ್ರಶಸ್ತಿ! 

ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ ಹಾಗೂ ಬ್ರೆಜಿಲ್ ನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

Published: 26th May 2020 01:25 PM  |   Last Updated: 26th May 2020 01:26 PM   |  A+A-


Image courtesy: UNNews

ಸಂಗ್ರಹ ಚಿತ್ರ

Posted By : Srinivas Rao BV
Source : UNI

ನವದೆಹಲಿ: ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ ಹಾಗೂ ಬ್ರೆಜಿಲ್ ನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಪ್ರಶಸ್ತಿಗೆ ಭಾಜನರಾಗಿರುವ ಮಹಿಳಾ ಶಾಂತಿಪಾಲಕರನ್ನು ವಿಶ್ವಸಂಸ್ಥೆ ಪ್ರಭಾವಿ ಮಾದರಿ ವ್ಯಕ್ತಿಗಳೆಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ಇಬ್ಬರು ಮಹಿಳಾ ಶಾಂತಿಪಾಲಕರಿಗೆ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು 2016 ರಲ್ಲಿ ಸ್ಥಾಪಿಸಲಾಗಿದ್ದು, ಶಾಂತಿ ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆ, ಶಾಂತಿ ಹಾಗೂ ಭದ್ರತೆ ಸಂಬಂಧ ವಿಶ್ವಸಂಸ್ಥೆಯ ತತ್ವಗಳನ್ನು ಉತ್ತೇಜಿಸಲು ವ್ಯಕ್ತಿಗತ ಪ್ರಯತ್ನ ಹಾಗೂ ಸಮರ್ಪಣೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಶಾಂತಿ ಕಾರ್ಯಾಚರಣೆಯ ಪಡೆಯ ಕಮಾಂಡರ್, ಹಾಗೂ ಮುಖ್ಯಸ್ಥರು ಮಹಿಳಾ ಶಾಂತಿಪಾಲಕರನ್ನು ಈ ಪ್ರಶಸ್ತಿಗೆ  ನಾಮಕರಣಗೊಳಿಸುತ್ತಾರೆ.ಮೇಜರ್ ಸುಮನ್ ಗವಾನಿ ಈ ಪ್ರಶಸ್ತಿಗೆ ಭಾಜನರಾಗಿರುವ ಮೊದಲ ಶಾಂತಿಪಾಲಕರಾಗಿದ್ದಾರೆ. 

ಈ ಹಿಂದೆ ಅವರನ್ನು ದಕ್ಷಿಣ ಸುಡಾನ್ ನ ವಿಶ್ವಸಂಸ್ಥೆ ಮಿಷನ್ (ಯುಎನ್ಎಂಐಎಸ್ಎಸ್) ನಲ್ಲಿ ನಿಯೋಜನೆ ಮಾಡಲಾಗಿತ್ತು. 230 ವಿಶ್ವಸಂಸ್ಥೆ ಸೇನಾ ವೀಕ್ಷಕರನ್ನು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದ್ದರು. ಮಹಿಳಾ ಸೇನಾ ವೀಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಶ್ರಮಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp