ಒಡಿಶಾ: ಕ್ವಾರಂಟೈನ್ ಸೆಂಟರ್ ಬಳಿ ರಕ್ಷಿಸಲಾದ ಪ್ಯಾಂಗೊಲಿನ್ ಗೆ ಕೋವಿಡ್-19 ಪರೀಕ್ಷೆ!

ಕಟಕ್ ಜಿಲ್ಲೆಯ ಕ್ವಾರಂಟೈನ್ ಸೆಂಟರ್ ವೊಂದರ ಬಳಿ ಸೋಮವಾರ ರಕ್ಷಿಸಲಾದ ಹೆಣ್ಣು ಪ್ಯಾಂಗೊಲಿನ್ ಗೆ ಇದೇ ಮೊದಲ ಬಾರಿ ಎಂಬಂತೆ ಕೋವಿಡ್-19 ಪರೀಕ್ಷೆ ನಡೆಸಲು ಒಡಿಶಾದ ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ಯಾಂಗೊಲಿನ್ ಚಿತ್ರ
ಪ್ಯಾಂಗೊಲಿನ್ ಚಿತ್ರ

ಭುವನೇಶ್ವರ್: ಕಟಕ್ ಜಿಲ್ಲೆಯ ಕ್ವಾರಂಟೈನ್ ಸೆಂಟರ್ ವೊಂದರ ಬಳಿ ಸೋಮವಾರ ರಕ್ಷಿಸಲಾದ ಹೆಣ್ಣು ಪ್ಯಾಂಗೊಲಿನ್ ಗೆ ಇದೇ ಮೊದಲ ಬಾರಿ ಎಂಬಂತೆ ಕೋವಿಡ್-19 ಪರೀಕ್ಷೆ ನಡೆಸಲು ಒಡಿಶಾದ ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬಾರಂಬಾ ವಲಯದ ಮಹುಲಿಯಾ ಯುಜಿಎಂಇ ಶಾಲೆಯ ಬಳಿ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರದ ಬಳಿ ಐದು ವರ್ಷದ ಹೆಣ್ಣು ಪ್ಯಾಂಗೊಲಿನ್ ನ್ನು ಅಘಗಡದ ಅರಣ್ಯ ವಿಭಾಗದ ಅಧಿಕಾರಿಗಳು ರಕ್ಷಿಸಿದ್ದರು. 

ಸ್ಥಳೀಯ ಮುಖಂಡರು ನೀಡಿದ ಮಾಹಿತಿ ಆಧಾರದ ಮೇಲೆ ತಮ್ಮ ತಂಡ ಕ್ವಾರಂಟೈನ್ ಕೇಂದ್ರದ ಬಳಿ ತೆರಳಿ ಪ್ಯಾಂಗೊಲಿನ್ ರಕ್ಷಿಸಿರುವುದಾಗಿ ವಿಭಾಗೀಯ ಅರಣ್ಯಾಧಿಕಾರಿ ಸಸ್ಮಿತಾ ಲೆಂಕಾ ತಿಳಿಸಿದ್ದಾರೆ. 

ಪ್ಯಾಂಗೊಲಿನ್ ರಕ್ಷಿಸಲಾದ ಕ್ವಾರಂಟೈನ್ ಕೇಂದ್ರದ ಬಳಿ 42 ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಅದನ್ನು ಕಾಡಿಗೆ ಬಿಡುವ ಮುನ್ನ ಸ್ವಾಬ್ ನ್ನು ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ  ಎಂದು ಲೆಂಕಾ ಹೇಳಿದ್ದಾರೆ. 

ಭುವನೇಶ್ವರದಲ್ಲಿನ ವನ್ಯಜೀವಿ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ನಡೆಸುವ ಸೌಕರ್ಯವಿದೆ. ಆದರೆ, ಅಂತಹ ಯಾವುದೇ ಸೌಕರ್ಯವಿಲ್ಲ, ಸರ್ಕಾರದಿಂದಲೂ ಕೋವಿಡ್-19 ಪರೀಕ್ಷೆ ನಡೆಸಲು ಅನುಮತಿ ಬಂದಿಲ್ಲ, ಪ್ಯಾಂಗೊಲಿನ್ ನಿಂದ ಸ್ವಾಬ್ ಕಲೆಹಾಕಿದ ನಂತರ ಅದನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವನ್ಯಜೀವಿ ಆರೋಗ್ಯ ಕೇಂದ್ರದ  ಅಧಿಕಾರಿಗಳು ತಿಳಿಸಿದ್ದಾರೆ. 

ಮನುಷ್ಯರ ಸ್ವಾಬ್ ಪರೀಕ್ಷೆಯಂತೆ ಯಾವುದೇ ಪ್ರಯೋಗಾಲಯದಲ್ಲಾದರೂ ಪ್ಯಾಂಗೊಲಿನ್ ಪರೀಕ್ಷೆ ನಡೆಸಬಹುದು ಎಂದು ಪ್ರಿವೆಂಟಿವ್ ಔಷಧ ಇಲಾಖೆ ಮುಖ್ಯಸ್ಥ ಡಾ. ನಿರಂಜನ್ ಶಾಹೂ ತಿಳಿಸಿದ್ದಾರೆ.  

ಪ್ಯಾಂಗೊಲಿನ್ ಹೇಗೆ ಕ್ವಾರಂಟೈನ್ ಕೇಂದ್ರಕ್ಕೆ ಬಂತು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com