ಪತಿ ಎಂದೂ ಪತ್ನಿಯ ಕೈಗೊಂಬೆ? ಮದುವೆ ನಿಶ್ಚಯವಾಗಿದ್ದ ಜೋಡಿಯ ನಡುವೆ ಜಗಳ ತಂದಿಟ್ಟ ವಿಡಿಯೋ!

 ಕೊರೋನಾವೈರಸ್ ಲಾಕ್‌ಡೌನ್ ಮಧ್ಯೆ ಪುರುಷರು ಮನೆಕೆಲಸಗಳನ್ನು ಮಾಡುವ ಬಗ್ಗೆಗಿನ ಒಂದು ತಮಾಷೆಯ ಸಂಗತಿ ಮಧ್ಯಪ್ರದೇಶದ ಜೋಡಿಯೊಂದರ ನಡುವೆ ಜಗಳಕ್ಕೆ ಆಸ್ಪದ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಕೊರೋನಾವೈರಸ್ ಲಾಕ್‌ಡೌನ್ ಮಧ್ಯೆ ಪುರುಷರು ಮನೆಕೆಲಸಗಳನ್ನು ಮಾಡುವ  ಬಗ್ಗೆಗಿನ ಒಂದು ತಮಾಷೆಯ ಸಂಗತಿ ಮಧ್ಯಪ್ರದೇಶದ ಜೋಡಿಯೊಂದರ ನಡುವೆ ಜಗಳಕ್ಕೆ ಆಸ್ಪದ  ನೀಡಿದೆ. ವಿವಾಹ ನಿಶ್ಚಯವಾಗಿದ್ದ ಈ ಜೋಡಿ ಜಗಳವನ್ನು ಭೋಪಾಲ್ ಕುಟುಂಬ ನ್ಯಾಯಾಲಯಕ್ಕೆ ಕೊಂಡೊಯ್ದು ಅಲ್ಲಿನ ಸಲಹೆಗಾರರು ನೀಡಿದ ತೀರ್ಪಿನ ನಂತರ ಅಂತಿಮವಾಗಿ ಜಗಳ ಪರಿಹಾರ ಕಂಡಿದೆ.

ಮದುವೆಯಾದ ಗಂಡ ಹೆಂಡತಿಯ ಗುಲಾಮನಾಗಿರುತ್ತಾನೆ ಎಂಬ ನುಡಿಗಟ್ಟನ್ನು ಆಡಿದ್ದೇ ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಅಂತಿಮವಾಗಿ ವರನ ಕಡೆಯವರು ತಾವಾಡಿದ ಮಾತಿಗೆ ಕ್ಷಮೆ ಯಾಚಿಸಿದ ಬಳಿಕ ಜಗಳ ಅಂತ್ಯ ಕಂಡಿದೆ.

"ವಿವಾಹ ನಿಶ್ಚಯವಾಗಿದ್ದ ಯುವತಿ ಹಾಗೂ ಯುವಕ  ಮೇ 20 ರಂದು ಮದುವೆಯಾಗುವವರಿದ್ದರು. ಈ ನಡುವೆ ಯುವತಿ ವಿವಾಹದ ನಂತರ ಪತಿ ಪತ್ನಿಯ ದಾಸಿಯಂತೆ ಕೆಲಸ ಮಾಡುವ ಪುರುಷರ ಬಗ್ಗೆ ತಮಾಷೆಯಾಗಿ ನೋಡುವ ವಿಡಿಯೊವನ್ನು ಯುವಕನಿಗೆ ಕಳಿಸಿದ್ದಳು. ಆತನದನ್ನು ತಮಾಷೆಯಾಗಿ ತೆಗೆದುಕೊಂಡಿರಲಿಲ್ಲ ಮತ್ತು ಯುವಕ "ತಾನು ಅಂತಹ ವರ್ಗಕ್ಕೆ ಸೇರಿದವನಲ್ಲ" ಎಂದು ಪ್ರತಿಕ್ರಯಿಸಿದ್ದ.  ಇದರಿಂದ ಕುಪಿತಳಾದ ಯುವತಿ ಮದುವೆಯನ್ನು ರದ್ದುಗೊಳಿಸಲು ಕೋರಿದ್ದಾಳೆ. 

"ವಿವಾಹ ನಿಶ್ಚಯವಾಗಿದ್ದ ಯುವಕ ಹಾಗೂ ಯುವತಿಯ ಕುಟುಂಬ ವರ್ಗ ಯಾಲಯವನ್ನು ಸಂಪರ್ಕಿಸಿದವು, ಮತ್ತು ನಾಲ್ಕು ದಿನಗಳ ಸಮಾಲೋಚನೆಯ ನಂತರ ಯುವತಿ ತನ್ನ ಮನಸ್ಸನ್ನು ಬದಲಾಯಿಸಿದಳು. ಅವನ ಪ್ರತಿಕ್ರಿಯೆ ನನಗೆ ಬಹಳ ನೋವು ಉಂಟುಮಾಡಿತ್ತು ಎಂದಾಕೆ ಹೇಳಿದ್ದಾಳೆ. ಮತ್ತು ಯುವಕ ತಾನಾಡಿದ ಮಾತಿಗಾಗಿ ಆತ ಯುವತಿಯ ಕ್ಷಮೆಯಾಚಿಸಿದ್ದಾನೆ"

"ಆತ ಬಹಿರಂಗ ಕ್ಷಮೆ ಯಾಚಿಸಿದ ಬಳಿಕ ಮೈ ಜೋರು ಕಾ ಗುಲಾಮ್ ಬಂಕೆ ರಾಹುಂಗಾ' ಎಂದದ್ದಲ್ಲದೆ ಅವನು ಅವಳನ್ನು ತುಂಬಾ ಪ್ರೀತಿಸುವುದಾಗಿ ಹೇಳಿದ್ದಾನೆ. ಕ್ಷಮೆಯಾಚನೆಯು ಸ್ವಯಂಪ್ರೇರಿತವಾಗಿತ್ತು ಮತ್ತು ಯಾರೂ ಅದನ್ನು ಕೇಳಿರಲಿಲ್ಲ" ಮುಂಬೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಈ ಜೋಡಿ ಜೂನ್ 10 ರಂದು ವಿವಾಹವಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com