ಮದುವೆಗೆ ಬಂದಿದ್ದ ಸಂಬಂಧಿಗೆ ಕೊರೋನಾ ಪಾಸಿಟಿವ್, ದಂಪತಿ, ಇತರೆ 100 ಮಂದಿಗೆ ಕ್ವಾರಂಟೈನ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ನವ ದಂಪತಿ ಹಾಗೂ ಕುಟುಂಬಸ್ಥರು ಸೇರಿದಂತೆ ಮದುವೆಗೆ ಬಂದಿದ್ದ ಇತರೆ 100 ಮಂದಿ ಸರ್ಕಾರಿ ಕ್ವಾರಂಟೈನ್ ಕೇಂದ್ರ ಸೇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ನವ ದಂಪತಿ ಹಾಗೂ ಕುಟುಂಬಸ್ಥರು ಸೇರಿದಂತೆ ಮದುವೆಗೆ ಬಂದಿದ್ದ ಇತರೆ 100 ಮಂದಿ ಸರ್ಕಾರಿ ಕ್ವಾರಂಟೈನ್ ಕೇಂದ್ರ ಸೇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮದುವೆಗೆ ಆಗಮಿಸಿದ್ದ ವಧುವಿನ ಸಂಬಂಧಿಯೊಬ್ಬರಿಗೆ ಮಂಗಳವಾರ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ದಂಪತಿ ಹಾಗೂ ಇತರೆ 100 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಚಿಂದ್ವಾರ ನಗರ ಪಾಲಿಕೆ ಆಯುಕ್ತ ರಾಜೇಶ್ ಶಾಹಿ ಅವರು ತಿಳಿಸಿದ್ದಾರೆ.

ಕೊರೋನಾ ಪಾಸಿಟಿವ್ ಬಂದಿರುವ ವಧುವಿನ ಸಂಬಂಧಿ ಸಿಐಎಸ್ಎಫ್ ಸಿಬ್ಬಂದಿಯಾಗಿದ್ದು, ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಮೇ 20-21ರಂದು ಸಿಐಎಸ್ ಎಫ್ ಸಿಬ್ಬಂದಿ ಜಿಲ್ಲೆಗೆ ಬಂದಿದ್ದಾರೆ. ನಂತರ ಮೇ 26ರಂದು ಮದುವೆಯಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೂರು-ನಾಲ್ಕು ದಿನಗಳ ಹಿಂದೆಯೇ ಈ ವ್ಯಕ್ತಿಗೆ ಕೊವಿಡ್-19 ಲಕ್ಷಣಗಳು ಕಾಣಿಸಿಕೊಂಡಿವೆ. ನಂತರ ಅವರ ಮಾದರಿಯನ್ನು ತೆಗೆದುಕೊಳ್ಳಲಾಯಿತು ಮತ್ತು ಅವರನ್ನು ಚಿಂದ್ವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com