ದೆಹಲಿ-ಲುಧಿಯಾನ ವಿಮಾನ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್, ಸಿಬ್ಬಂದಿ ಸೇರಿ 41 ಮಂದಿಗೆ ಕ್ವಾರಂಟೈನ್

ರಾಷ್ಟ್ರ ರಾಜಧಾನಿ ದೆಹಲಿಯಿಂದ ಲುಧಿಯಾನಕ್ಕೆ ಅಲೈಯನ್ಸ್ ಏರ್ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಬುಧವಾರ ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ
ಏರ್ ಇಂಡಿಯಾ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಲುಧಿಯಾನಕ್ಕೆ ಅಲೈಯನ್ಸ್ ಏರ್ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಬುಧವಾರ ಏರ್ ಇಂಡಿಯಾ ತಿಳಿಸಿದೆ.

ಕೊವಿಡ್-19 ಲಾಕ್ ಡೌನ್ ಪರಿಣಾಮ ಸುಮಾರು ಎರಡು ತಿಂಗಳ ನಂತರ ಮೇ 25ರಂದು ಮತ್ತೆ ದೇಶಿ ವಿಮಾನ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ವಿಮಾನ ಪ್ರಯಾಣಿಕನಿಗೆ ಸೋಂಕು ತಗುಲಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

ಅಲೈಯನ್ಸ್ ಏರ್, ಏರ್ ಇಂಡಿಯಾದ ಭಾಗವಾಗಿದ್ದು, ಪ್ರಾದೇಶಿಕ ಹಾರಾಟ ನಡೆಸುತ್ತದೆ. 

ಸೋಮವಾರ ಅಲೈಯನ್ಸ್ ಏರ್ ನ ಎಐ9ಐ837 ದೆಹಲಿ - ಲುಧಿಯಾನ ವಿಮಾನದಲ್ಲಿದ್ದ ಪ್ರಯಾಣಿಕನಿಗೆ ಮಂಗಳವಾರ ಕೊವಿಡ್-19 ಪಾಸಿಟಿವ್ ಬಂದಿದೆ. ಈ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸೇರಿದಂತೆ 41 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ವಿಮಾನದಲ್ಲಿ ಒಟ್ಟು 36 ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿ ಇದ್ದರು. ಕೊವಿಡ್-19ಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಚಿವಾಲಯ ಹಾಗೂ ವಿಮಾನಯಾನ ನಿರ್ದೇಶನಾಲಯ ನೀಡಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com