ಲಡಾಕ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಸೇನೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಪಿಎಂ ಮೋದಿ

ಚೀನಾ ದೇಶದ ಸೇನೆಯೊಂದಿಗೆ ಗಡಿಯಲ್ಲಿ ಸೇನೆಯ ನಿಲುಗಡೆ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನೆ ಮೂರು ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಭಾರತ-ಚೀನಾ ಗಡಿಭಾಗ
ಭಾರತ-ಚೀನಾ ಗಡಿಭಾಗ

ನವದೆಹಲಿ:ಚೀನಾ ದೇಶದ ಸೇನೆಯೊಂದಿಗೆ ಗಡಿಯಲ್ಲಿ ಸೇನೆಯ ನಿಲುಗಡೆ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನೆ ಮೂರು ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಅದಕ್ಕೂ ಮುನ್ನ ಮೋದಿಯವರು ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರೂ ಪಡೆಗಳ ಮುಖ್ಯಸ್ಥರು ಭೇಟಿ ಮಾಡಿ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ. ಸಿಕ್ಕಿಮ್ ಮತ್ತು ಲಡಾಕ್ ನಲ್ಲಿ ಸೇನೆಯ ನಿಯೋಜನೆ ಸಮಯದಲ್ಲಿ ಈ ಮಾತುಕತೆ ನಡೆದಿದ್ದು ಮಹತ್ವ ಪಡೆದಿದೆ. ಸ್ಯಾಟಲೈಟ್ ಚಿತ್ರದಲ್ಲಿ ಚೀನಾ ಲಡಾಕ್ ಬಳಿ ವಾಯುನೆಲೆ ವಿಸ್ತರಿಸುತ್ತಿರುವುದು ಕಂಡುಬಂದಿದೆ.

ಸದ್ಯ ಭಾರತ-ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ, ಸಭೆಯಲ್ಲಿ ಆದ ಚರ್ಚೆಗಳೇನು, ಅದರ ಮುಖ್ಯಾಂಶಗಳು ಹೀಗಿವೆ:
ಭಾರತ ಮತ್ತು ಚೀನಾ ಪಡೆಗಳು ನಿಯೋಜನೆಗೊಂಡಿರುವ ಲಡಾಕ್ ಹತ್ತಿರ ಪಂಗೊಂಗ್ ಲೇಕ್ ಹತ್ತಿರ ಟಿಬೆಟ್ ನಿಂದ 200 ಕಿಲೋ ಮೀಟರ್ ದೂರದಲ್ಲಿ ನಗಾರಿ ಗುನ್ಸ ವಾಯುನೆಲೆ ಹತ್ತಿರ ಬೃಹತ್ ಪ್ರಮಾಣದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಸ್ಯಾಟಲೈಟ್ ಚಿತ್ರ ತೋರಿಸುತ್ತದೆ. ಮತ್ತೊಂದು ಚಿತ್ರದಲ್ಲಿ ಹೆಲಿಕಾಪ್ಟರ್ ಅಥವಾ ಯುದ್ಧ ವಿಮಾನದ ಚಿತ್ರವಿದೆ. ಇದು ಮೇ 20ರಂದು ಸೆರೆಹಿಡಿದ ಚಿತ್ರವಾಗಿದೆ.

ಮೂರನೇ ಚಿತ್ರದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಾಯುಪಡೆಯ ಜೆ-11 ಅಥವಾ ಜೆ-16 ನಾಲ್ಕು ಯುದ್ಧ ವಿಮಾನಗಳಿವೆ.
ಗಲ್ವಾನ್ ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣವನ್ನು ಭಾರತ ಆರಂಭಿಸಿದ್ದಕ್ಕೆ ಚೀನಾ ತನ್ನ ಅಸಮಾಧಾನ ತೋರಿಸಿದ್ದು ಇದರಿಂದ ಸೇನೆಯನ್ನು ನಿಯೋಜಿಸಿತು.ಸ್ಥಳೀಯರಿಗೆ ಸಹಾಯವಾಗಲು ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗಿದೆ.

ಲಡಾಕ್ ನ ವಿವಾದಿತ ಪ್ರದೇಶದಲ್ಲಿ ಚೀನಾದ ಹೆಲಿಕಾಪ್ಟರ್ ಗಸ್ತು ತಿರುಗುತ್ತಿರುವುದು ಕಂಡುಬಂದಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಭದೌರಿಯಾ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com