ತೇಜಸ್ ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ಭಾರತೀಯ ವಾಯುಪಡೆಗೆ ಸೇರ್ಪಡೆ
ಭಾರತೀಯ ವಾಯುಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ದೇಶಿ ನಿರ್ಮಿತ ತೇಜಸ್ ಎಂಕೆ -1 ಎಫ್‌ಒಸಿ (ಫೈನಲ್ ಆಪರೇಶನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ಬುಧವಾರ ಕೊಯಮತ್ತೂರಿನ ಸುಲೂರ್ ವಾಯುಪಡೆ ನಿಲ್ದಾಣದಲ್ಲಿ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದೆ.
Published: 27th May 2020 04:24 PM | Last Updated: 27th May 2020 06:05 PM | A+A A-

ಸಾಂದರ್ಭಿಕ ಚಿತ್ರ
ಕೊಯಮತ್ತೂರು: ಭಾರತೀಯ ವಾಯುಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ದೇಶಿ ನಿರ್ಮಿತ ತೇಜಸ್ ಎಂಕೆ -1 ಎಫ್‌ಒಸಿ (ಫೈನಲ್ ಆಪರೇಶನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ಬುಧವಾರ ಕೊಯಮತ್ತೂರಿನ ಸುಲೂರ್ ವಾಯುಪಡೆ ನಿಲ್ದಾಣದಲ್ಲಿ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ.
ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್ ಭಡೌರಿಯಾ ಅವರು ತೇಜಸ್ ಯುದ್ಧ ವಿಮಾನ ನಂ. 45 ಸ್ಕ್ವಾಡ್ರನ್ (ಫ್ಲೈಯಿಂಗ್ ಬುಲೆಟ್ಸ್) ಅನ್ನು ವಾಯುನೆಲೆಯಲ್ಲಿ ಹಾರಿಸುವ ಮೂಲಕ ವಾಯುಪಡೆಗೆ ಸೇರಿಸಿಕೊಳ್ಳಲಾಯಿತು.
''ಫ್ಲೈಯಿಂಗ್ ಬುಲೆಟ್ಸ್-45' ಎಂಬ ಹೆಸರಿನ ಈ ಲಘು ಯುದ್ಧ ವಿಮಾನ ಬೆಂಗಳೂರಿನ ಎಚ್ಎಎಲ್ ನಲ್ಲಿ ನಿರ್ಮಾಣವಾಗಿದೆ.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಭಡೌರಿಯಾ ಅವರು, ಭಾರತೀಯ ವಾಯುಪಡೆ ಈಗ ವಿದೇಶಿ ಉತ್ಪನ್ನಗಳಿಗಿಂತ ಸ್ಥಳೀಯ ಉತ್ಪನ್ನಗಳನ್ನು ಅವಲಂಬಿಸಿದೆ ಎಂದರು.