ಮಧ್ಯ ಪ್ರದೇಶ: ಶ್ರಮಿಕ್ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಶ್ರಮಿಕ್ ವಿಶೇಷ ರೈಲಿನಲ್ಲಿ ಗುಜರಾತ್‌ನಿಂದ ಉತ್ತರ ಪ್ರದೇಶದ ತನ್ನ ಊರಿಗೆ ಪ್ರಯಾಣಿಸುತ್ತಿದ್ದ 28 ವರ್ಷದ ಮಹಿಳೆ ಮಾರ್ಗಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಸೌರ್: ಶ್ರಮಿಕ್ ವಿಶೇಷ ರೈಲಿನಲ್ಲಿ ಗುಜರಾತ್‌ನಿಂದ ಉತ್ತರ ಪ್ರದೇಶದ ತನ್ನ ಊರಿಗೆ ಪ್ರಯಾಣಿಸುತ್ತಿದ್ದ 28 ವರ್ಷದ ಮಹಿಳೆ ಮಾರ್ಗಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಮಧ್ಯ ಪ್ರದೇಶದ ರತ್ಲಂ ರೈಲ್ವೆ ನಿಲ್ದಾಣದಕ್ಕೆ ಆಗಮಿಸುತ್ತಿದ್ದಂತೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗುವನ್ನು ರತ್ಲಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೂಜಾ ದೇವಿ ಎಂಬ ಮಹಿಳೆ ತನ್ನ ಪತಿಯೊಂದಿಗೆ ಗುಜರಾತ್‌ನ ಸೂರತ್‌ನಿಂದ ಉತ್ತರ ಪ್ರದೇಶದ ಪ್ರತಾಪ್‌ಗಢಕ್ಕೆ ಬುಧವಾರ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪಶ್ಚಿಮ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿತೇಂದ್ರ ಜೈನ್ ಹೇಳಿದ್ದಾರೆ.

"ಮಹಿಳೆಗೆ ಹೇರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಸಹ ಪ್ರಯಾಣಿಕರೊಬ್ಬರು ಟ್ವಿಟ್ ಮೂಲಕ ರತ್ಲಂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು" ಎಂದು ಜೈನ್ ತಿಳಿಸಿದ್ದಾರೆ.

ಈ ಟ್ವಿಟ್ ನಂತರ ವಾಣಿಜ್ಯ ನಿಯಂತ್ರಣ ಇಲಾಖೆ ಮತ್ತು ಟ್ವಿಟರ್ ಸೆಲ್ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಿ, ಆಂಬುಲೆನ್ಸ್ ತರಿಸಿಕೊಳ್ಳಲಾಯಿತು. ರೈಲು ನಿಲ್ದಾಣಕ್ಕೆ ಬರುವ ಮುನ್ನವೇ ವೈದ್ಯೆ ಅಂಕಿತಾ ಮೆಹ್ತಾ ಹಾಗೂ ಅವರ ತಂಡ ಸ್ಥಳಕ್ಕೆ ಬಂದಿತ್ತು. ನಂತರ ಮಹಿಳೆ ಇದ್ದ ಬೋಗಿಯಲ್ಲೇ ವೈದ್ಯರು ಹೇರಿಗೆ ಮಾಡಿಸಿದರು. ಬಳಿಕ ಮಗು ಹಾಗೂ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಜೈನ್ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com