ದೇಶದಲ್ಲಿನ 30 ಗುಂಪುಗಳಿಂದ ಕೋವಿಡ್-19 ಲಸಿಕೆ ಕಂಡುಹಿಡಿಯುವ ಪ್ರಯತ್ನ: ಪಿಎಸ್ಎ ವಿಜಯ್ ರಾಘವನ್ 

ದೇಶದಲ್ಲಿನ ದೊಡ್ಡ ಉದ್ಯಮಿಗಳಿಂದ ಹಿಡಿದು ತಜ್ಞರವರೆಗೂ ಸುಮಾರು 30 ಗುಂಪುಗಳಿಂದ ಕೊರೋನಾವೈರಸ್ ವಿರುದ್ಧದ ಲಸಿಕೆ ಕಂಡುಹಿಡಿಯುವ ಪ್ರಯತ್ನ ಸಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿನ ದೊಡ್ಡ ಉದ್ಯಮಿಗಳಿಂದ ಹಿಡಿದು ತಜ್ಞರವರೆಗೂ ಸುಮಾರು 30 ಗುಂಪುಗಳಿಂದ ಕೊರೋನಾವೈರಸ್ ವಿರುದ್ಧದ ಲಸಿಕೆ ಕಂಡುಹಿಡಿಯುವ ಪ್ರಯತ್ನ ಸಾಗಿದೆ. ಈ 30 ಗುಂಪುಗಳ ಪೈಕಿ 20ರ ಕಾರ್ಯವೈಖರಿಯಲ್ಲಿ ಭರವಸೆ ಮೂಡಿಸಿವೆ ಎಂದು ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್ ಗುರುವಾರ ತಿಳಿಸಿದ್ದಾರೆ.

ಕೊರೋನಾವೈರಸ್ ಲಸಿಕೆ ಅಭಿವೃದ್ಧಿಪಡಿಸಲು ಸುಮಾರು 10 ವರ್ಷಗಳೇ ಬೇಕಾಗಲಿವೆ. ಆದರೆ, ವರ್ಷದೊಳಗೆ ಲಸಿಕೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ಇಡೀ ವಿಶ್ವವೇ ಮುಂದಾಗಿದ್ದಾರೆ ಎಂದಿದ್ದಾರೆ.

ಹೊಸ ಔಷಧ ಅಭಿವೃದ್ಧಿ ದೊಡ್ಡ ಸವಾಲಾಗಿದೆ. ಇಂತಹ ಲಸಿಕೆಗಳು ಸಹಜವಾಗಿಯೇ ಧೀರ್ಘ ಅವಧಿ ತೆಗೆದುಕೊಳ್ಳಲಿವೆ. ಅನೇಕ ಪ್ರಯತ್ನಗಳು ವಿಫಲವಾಗಿವೆ, ಆದಾಗ್ಯೂ, ಅನೇಕ ಪ್ರಯತ್ನಗಳು ಮುಂದುವರೆದಿವೆ ಎಂದು ಅವರು ತಿಳಿಸಿದ್ದಾರೆ.

ಔಷಧ ಕಂಡುಹಿಡಿಯುವಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ ಮತ್ತು ಎಐಸಿಟಿಇ ಕೂಡಾ ಮುಂಚೂಣಿಯಲ್ಲಿವೆ ಎಂದು ವಿಜಯ್ ರಾಘವನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com