ಲಾಕ್ ಡೌನ್ ಮುಂದುವರಿಕೆ ಕುರಿತ ವರದಿಗಳು ಕಪೋಲಕಲ್ಪಿತ: ಕೇಂದ್ರ ಗೃಹಸಚಿವಾಲಯ

ಮೇ 31ಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶಾದಾದ್ಯಂತ ಜಾರಿಗೊಳಿಸಿದ ಲಾಕ್‌ಡೌನ್ ಐದನೇ ಅವಧಿಗೂ ವಿಸ್ತರಿಸುವುದೆಂಬ ವರದಿಗಳನ್ನು ನಿರಾಕರಿಸಿರುವ ಗೃಹ ವ್ಯವಹಾರಗಳ ಸಚಿವಾಲಯ ಇದು ಸಂಪೂರ್ಣ ಸುಳ್ಳು ಎಂದು ಹೇಳಿದೆ
ಲಾಕ್ ಡೌನ್ ಚಿತ್ರ
ಲಾಕ್ ಡೌನ್ ಚಿತ್ರ

ನವದೆಹಲಿ: ಮೇ 31ಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶಾದಾದ್ಯಂತ ಜಾರಿಗೊಳಿಸಿದ ಲಾಕ್‌ಡೌನ್ ಐದನೇ ಅವಧಿಗೂ ವಿಸ್ತರಿಸುವುದೆಂಬ ವರದಿಗಳನ್ನು ನಿರಾಕರಿಸಿರುವ ಗೃಹ ವ್ಯವಹಾರಗಳ ಸಚಿವಾಲಯ ಇದು ಸಂಪೂರ್ಣ ಸುಳ್ಳು ಎಂದು ಹೇಳಿದೆ.

 ಸುದ್ದಿ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವಾಲಯದ ವಕ್ತಾರರು ತಮ್ಮ ಟ್ವೀಟ್ ಸಂದೇಶದಲ್ಲಿ.’ ಲಾಕ್‍ಡೌನ್‍ ಕುರಿತ ವರಿಗಳೆಲ್ಲವೂ ಸುಳ್ಳು. ಇವೆಲ್ಲಾ ವರದಿ ಮಾಡುವವರ ಊಹಾಪೋಹಗಳಾಗಿವೆ.’ ಎಂದು ಸಚಿವಾಲಯ ಹೇಳಿದೆ.

 ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ ಎಂದು  ಸರ್ಕಾರ ಜೂನ್ 1 ರಿಂದ ಘೋಷಿಸಿ ಲಾಕ್‍ಡೌನ್ ಸಡಿಲಿಸಿದೆ ಎಂಬ ಊಹಾಪೋಹದ ನಡುವೆ ಸಚಿವಾಲಯ ಈ ಸ್ಪಷ್ಟನೆ ನೀಡಿದೆ. 

ಮುಂದಿನ ಆದೇಶ ಬರುವವರೆಗೂ ಶಾಪಿಂಗ್ ಮಾಲ್‌ಗಳು, ಶಾಲಾ-ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com