ನೇಪಾಳದ ಹೊಸ ರಾಜಕೀಯ ಮ್ಯಾಪ್ ಗೆ ತಡೆ, ಪ್ರಧಾನಿ ಕೆ ಪಿ ಶರ್ಮ ಒಲಿಗೆ ಹಿನ್ನಡೆ

ಕೇಂದ್ರದ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ವಿವಾದದಲ್ಲಿ ನಿಲುವು ತೆಗೆದುಕೊಳ್ಳಬಹುದು ಎಂದು ನೇಪಾಳ ಕಾಂಗ್ರೆಸ್ ಹೇಳಿದ್ದರಿಂದ ಮೂರು ಭಾರತೀಯ ಪ್ರಾಂತ್ಯಗಳನ್ನು ತನ್ನ ಹೊಸ ರಾಜಕೀಯ ಮ್ಯಾಪ್ ನಲ್ಲಿ ಸೇರಿಸಬೇಕೆಂಬ ನೇಪಾಳ ಪ್ರಧಾನಿ ಕೆ ಪಿ ಶರ್ಮ ಒಲಿಗೆ ತೀವ್ರ ಹಿನ್ನಡೆಯಾದಂತಾಗಿದೆ.
ಕೆ ಪಿ ಶರ್ಮ ಒಲಿ
ಕೆ ಪಿ ಶರ್ಮ ಒಲಿ

ನವದೆಹಲಿ: ಕೇಂದ್ರದ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ವಿವಾದದಲ್ಲಿ ನಿಲುವು ತೆಗೆದುಕೊಳ್ಳಬಹುದು ಎಂದು ನೇಪಾಳ ಕಾಂಗ್ರೆಸ್ ಹೇಳಿದ್ದರಿಂದ ಮೂರು ಭಾರತೀಯ ಪ್ರಾಂತ್ಯಗಳನ್ನು ತನ್ನ ಹೊಸ ರಾಜಕೀಯ ಮ್ಯಾಪ್ ನಲ್ಲಿ ಸೇರಿಸಬೇಕೆಂಬ ನೇಪಾಳ ಪ್ರಧಾನಿ ಕೆ ಪಿ ಶರ್ಮ ಒಲಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ಕಲಪಾಣಿ, ಲಿಪುಲೇಖ್, ಲಿಂಪಿಯಾಧುರಗಳನ್ನು ನೇಪಾಳ ಪ್ರಾಂತ್ಯದೊಳಗೆ ಸೇರಿಸಬೇಕೆಂದು ಹೊಸ ರಾಜಕೀಯ ಮ್ಯಾಪನ್ನು ಇತ್ತೀಚೆಗೆ ನೇಪಾಳ ಸಂಸತ್ತಿನಲ್ಲಿ ಮಂಡಿಸಲಾಯಿತು. ಇದನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು ರಾಷ್ಟ್ರೀಯವಾದಿ ಭಾವನೆಯನ್ನು ಪ್ರಲೋಭಿಸಿದಂತಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಒಲಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಬಹುತೇಕ ನೇಪಾಳೀಯರೇ ಹೇಳುತ್ತಿದ್ದು ನೇಪಾಳದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಕಳೆದ ಮೇ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಿಪುಲೇಖ್ ನಲ್ಲಿ ರಸ್ತೆ ಉದ್ಘಾಟಿಸಿದ ನಂತರ ಗಡಿ ವಿವಾದ ಮುನ್ನೆಲೆಗೆ ಬಂದಿತ್ತು. ಈ ಪ್ರಾಂತ್ಯ ತಮಗೆ ಸೇರಿದ್ದು ಎಂಬುದು ನೇಪಾಳ ಸರ್ಕಾರದ ವಾದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com