ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ಆಹಾರ, ನೀರು ನೀಡಿ: ರೈಲ್ವೆ ಇಲಾಖೆ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

ಕೊರೋನಾ ಲಾಕ್‌ಡೌನ್‌ ಪರಿಣಾಮ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಶ್ರಮಿಕ್ ವಿಶೇಷ ರೈಲುಗಳನ್ನು ಆರಂಭಿಸಿದೆ. ಆದರೆ ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ವಲಸಿಗರ....
ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು

ನವದೆಹಲಿ: ಕೊರೋನಾ ಲಾಕ್‌ಡೌನ್‌ ಪರಿಣಾಮ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಶ್ರಮಿಕ್ ವಿಶೇಷ ರೈಲುಗಳನ್ನು ಆರಂಭಿಸಿದೆ. ಆದರೆ ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ವಲಸಿಗರ ಅವ್ಯವಸ್ಥೆ, ಹಸಿವು, ಬಳಲಿಕೆ ಮತ್ತು ಸಾವು ಪುನಾರಾವರ್ತಿತವಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ವಲಸಿಗರಿಗೆ ಮೊದಲು ಆಹಾರ ಮತ್ತು ನೀರು ನೀಡುವಂತೆ ಹಾಗೂ ಅವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ರೇಲ್ವೆ ಇಲಾಖೆ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದೆ.

ವಲಸೆ ಕಾರ್ಮಿಕರ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಪರ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದೆ.

ವಲಸೆ ಕಾರ್ಮಿಕರ ಪ್ರಯಾಣ ದರವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಬೇಕು. ವಲಸಿಗರಿಗೆ ರೈಲು ಅಥವಾ ಬಸ್ಸುಗಳ ಮೂಲಕ ಪ್ರಯಾಣಕ್ಕೆ ಯಾವುದೇ ಶುಲ್ಕ ವಿಧಿಸಬಾರದು. ಲಾಕ್ ಡೌನ್ ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಅವರು ಇರುವ ರಾಜ್ಯಗಳಲ್ಲಿ ಉಚಿತ ಆಹಾರ ಮತ್ತು ನೀರನ್ನು ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಮೊದಲ ಸಮಸ್ಯೆ, ನಂತರ ವಿಶೇಷ ರೈಲಿನಲ್ಲಿ ಪ್ರಯಾಣಿಸುವುದಕ್ಕಾಗಿ ನೋಂದಣಿ ಮಾಡಿಕೊಂಡರೂ ವಾರಗಟ್ಟಲೇ ಕಾಯಬೇಕು. ಈ ಹಂತದಲ್ಲಿ ಇವರ ಬಳಿ ಪ್ರಯಾಣಕ್ಕೆ ಹಣ ಕೇಳಲಾಗುವುದೇ? ಎಲ್ಲರನ್ನೂ ಒಂದೇ ಬಾರಿಗೆ ಸ್ಥಳಾಂತರಲು ಆಗುವುದಿಲ್ಲ. ಆದರೆ ಅವರು ಊರಿಗೆ ತೆರಳಲು ಬಸ್ ಅಥವಾ ರೈಲು ವ್ಯವಸ್ಥೆ ಆಗುವವರೆಗೆ ಅವರಿಗೆ ಆಹಾರ, ನೀರು ಮತ್ತು ವಸತಿ ವ್ಯವಸ್ಥೆಯಾಗಬೇಕು ಎಂದು ಕೋರ್ಟ್ ಹೇಳಿದೆ.

ಪರಿಸ್ಥಿತಿಯನ್ನು "ಅಭೂತಪೂರ್ವ" ಎಂದು ಕರೆದ ಕೇಂದ್ರ ಸರ್ಕಾರ, ಮೇ 1 ರಂದು ವಿಶೇಷ ರೈಲು ಸೇವೆ ಪ್ರಾರಂಭವಾದಾಗಿನಿಂದ ಸುಮಾರು 91 ಲಕ್ಷ ವಲಸಿಗರನ್ನು ಅವರ ರಾಜ್ಯಗಳಿಗೆ ಸಾಗಿಸಲಾಗಿದೆ ಎಂದು ಕೋರ್ಟ್ ಗೆ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com