ವಿಮಾನ ಸೇವೆ ಪುನಾರಂಭ: 22 ಪ್ರಯಾಣಿಕರಲ್ಲಿ ಕೊರೋನಾ ಸೋಂಕು, ತಮಿಳುನಾಡಿನಲ್ಲೇ 17 ಪ್ರಕರಣಗಳು

ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಜಾರಿ ಬಳಿಕ ಸ್ಥಗಿತವಾಗಿದ್ದ ವಿಮಾನಯಾನ ಸೇವೆಗೆ ಸೋಮವಾರ ಮರು ಚಾಲನೆ ನೀಡಿದ ಬೆನ್ನಲ್ಲೇ 22 ವಿಮಾನಯಾನ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಜಾರಿ ಬಳಿಕ ಸ್ಥಗಿತವಾಗಿದ್ದ ವಿಮಾನಯಾನ ಸೇವೆಗೆ ಸೋಮವಾರ ಮರು ಚಾಲನೆ ನೀಡಿದ ಬೆನ್ನಲ್ಲೇ 22 ವಿಮಾನಯಾನ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಸೋಮವಾರದಿಂದ ಆರಂಭವಾದ ಸೋಮವಾರದಿಂದ ವಿಮಾನ ಸೇವೆ ಆರಂಭವಾದ ಬಳಿಕ ಸುಮಾರು 22 ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 17 ಮಂದಿ ತಮಿಳುನಾಡಿಗೆ ಸೇರಿದವರಾಗಿದ್ದು,  ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ 9 ಮತ್ತು ಸೇಲಂ ನಲ್ಲಿ ಐದು ಮತ್ತು ಮದುರೈ ನಲ್ಲಿ ಮೂರು, ತಿರುಚ್ಚಿಯಲ್ಲಿ ಮೂರು, ನಾಮಕ್ಕಲ್ ನಲ್ಲಿ 2 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಈ ಎಲ್ಲ ಪ್ರಯಾಣಿಕರು ಮುಂಬೈ ಮತ್ತು ದೆಹಲಿಯಿಂದ ವಾಪಸ್ ಆಗಿದ್ದರು.

ಇನ್ನು ಗೋವಾ ಮತ್ತು ಕರ್ನಾಟಕದಲ್ಲಿ ಈ ಪ್ರಮಾಣ ತಗ್ಗಿದ್ದು, ಗೋವಾ ಎಲ್ಲ ವಿಮಾನ ಪ್ರಯಾಣಿಕರ ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ಕೊರೋನಾ ನೆಗೆಟಿವ್ ಪ್ರಮಾಣ ಪತ್ರವಿರುವ ಪ್ರಯಾಣಿಕರಿಗೆ ಟೆಸ್ಟ್ ನಿಂದ ವಿನಾಯಿತಿ ನೀಡಿದೆ. ಇನ್ನು ಕರ್ನಾಟಕ ಕೊರೋನಾ  ಸೋಂಕು ಯಥೇಚ್ಛವಾಗಿರುವ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತಮಿಳುನಾಡು ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಂದ ಬರುವ ವಿಮಾನಗಳ ಸಂಖ್ಯೆಗಳನ್ನು ಕಡಿತಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. 

ಅಲ್ಲದೆ ತುರ್ತು ಮತ್ತು ವೈದ್ಯಕೀಯ ವಿಚಾರ ಹೊರತು ಪಡಿಸಿ ಈ ಪಂಚ ರಾಜ್ಯಗಳ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗೆ ನಿರ್ಬಂಧ ಹೇರಿದೆ. ಈ ಬಗ್ಗೆ ಕರ್ನಾಟಕ ಸಚಿವ ಮಾಧು ಸ್ವಾಮಿ ಅವರು ಮಾಹಿತಿ ನೀಡಿದ್ದು, ಸೋಂಕು ಪ್ರಕರಣಗಳು ಅತಿ ಹೆಚ್ಚಾಗಿರುವ ರಾಜ್ಯಗಳಿಂದ ಕರ್ನಾಟಕಕ್ಕೆ  ವಿಮಾನ ಸೇವೆ ನಿರ್ಬಂಧ ಮಾಡಲಾಗಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com