2020ರ ಜನವರಿ-ಮಾರ್ಚ್‌ನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 3.1ಕ್ಕೆ ಕುಸಿತ!

ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದ ಕುಸಿತದ ಹಿನ್ನೆಲೆಯಲ್ಲಿ 2019-20ರ ಕೊನೆಯ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಜೆಡಿಪಿ ಬೆಳವಣಿಗೆ ದರ ಶೇ. 4.1ರಿಂದ ಶೇ. 3.1ಕ್ಕೆ ಕುಸಿದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದ ಕುಸಿತದ ಹಿನ್ನೆಲೆಯಲ್ಲಿ 2019-20ರ ಕೊನೆಯ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಜೆಡಿಪಿ ದರ ಶೇ. 4.1ರಿಂದ ಶೇ. 3.1ಕ್ಕೆ ಕುಸಿದಿದೆ. 

ಇದರ ಪರಿಣಾಮವಾಗಿ  2019ರ ಆರ್ಥಿಕ ವರ್ಷದಲ್ಲಿ ಜೆಡಿಪಿ ದರ  ಶೇ. 6. 1ರಿಂದ ಶೇ. 4.2ಕ್ಕೆ ಕುಸಿದಿದೆ.ಇದೇ ಕ್ರಮವಾಗಿ ತ್ರೈಮಾಸಿಕ ಬೆಳವಣಿಗೆ ದರ 2019-20ರ ಮೊದಲ ಆರ್ಥಿಕ ವರ್ಷದಲ್ಲಿ ಶೇ. 5.2ರಿಂದ ಕುಸಿತವಾಗಿದ್ದು, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ. 4.4ಕ್ಕೆ ಇಳಿದಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ. 4.1 ರಷ್ಟು ಇಳಿಕೆಯಾಗಿದೆ. 

ಕಳೆದ ಹಣಕಾಸು ವರ್ಷದಲ್ಲಿ, ಹೆಚ್ಚಿನ ಜಿಎಸ್ ಟಿ ದರಗಳು, ಕೃಷಿ ಕ್ಷೇತ್ರದಲ್ಲಿ ತೊಂದರೆ ಮತ್ತಿತರ ಕಾರಣದಿಂದಾಗಿ ಭಾರತದ ಆರ್ಥಿಕತೆಯು ತೀವ್ರ ಬೇಡಿಕೆಯ ಕುಸಿತವನ್ನು ಎದುರಿಸಿತು. ಈ ವರ್ಷ  ಕೋವಿಡ್ -19 ನಿಗ್ರಹಿಸಲು  ಏಕಾಏಕಿ ಜಾರಿಗೆ ತರಲಾದ ರಾಷ್ಟ್ರೀಯ ಲಾಕ್‌ಡೌನ್ ಆರ್ಥಿಕತೆಗೆ ತೀವ್ರ ಹೊಡೆತವನ್ನುಂಟು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com