ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ: ಕಾರು ಮಾಲೀಕನ ಪತ್ತೆಹಚ್ಚಿದ ಪೊಲೀಸರು

ಸಿಆರ್'ಪಿಎಫ್ ವಾಹನಕ್ಕೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆಸಿ 40 ಯೋಧರನ್ನು ಬಲಿಪಡೆದಿದ್ದ ಪುಲ್ವಾಮ ರೀತಿಯಲ್ಲಿಯೇ ಮತ್ತೊಂದು ಸಂಭಾವ್ಯ ದಾಳಿಯನ್ನು ಸೇನಾಪಡೆಗಳು ವಿಫಲಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಫೋಟಕ ತುಂಬಿದ್ದ ಕಾರಿನ ಮಾಲೀಕನನ್ನು ಪತ್ತೆಹಚ್ಚಿದ್ದಾರೆ. 
ಹಿದಾಯತುಲ್ಲಾಹ್ ಮಲಿಕ್
ಹಿದಾಯತುಲ್ಲಾಹ್ ಮಲಿಕ್

ಶ್ರೀನಗರ: ಸಿಆರ್'ಪಿಎಫ್ ವಾಹನಕ್ಕೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆಸಿ 40 ಯೋಧರನ್ನು ಬಲಿಪಡೆದಿದ್ದ ಪುಲ್ವಾಮ ರೀತಿಯಲ್ಲಿಯೇ ಮತ್ತೊಂದು ಸಂಭಾವ್ಯ ದಾಳಿಯನ್ನು ಸೇನಾಪಡೆಗಳು ವಿಫಲಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಫೋಟಕ ತುಂಬಿದ್ದ ಕಾರಿನ ಮಾಲೀಕನನ್ನು ಪತ್ತೆಹಚ್ಚಿದ್ದಾರೆ. 

ಕಾರು ಮಾಲೀಕನನ್ನು ಹಿದಾಯತುಲ್ಲಾಹ್ ಮಲಿಕ್ ಎಂದು ಗುರ್ತಿಸಲಾಗಿದೆ. ಈತ ಶೋಪಿಯಾನ್ ಜಿಲ್ಲೆಯ ನಿವಾಸಿಯಾಗಿದ್ದು, ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ ಎಂದು ತಿಳಿದುಬಂದಿದೆ. 

ಉಗ್ರರು 20 ಕೆಜಿ ಸ್ಫೋಟಕ ತುಂಬಿದ್ದ ಸ್ಯಾಂಟ್ರೋ ಕಾರ್'ನಲ್ಲಿ ದಾಳಿ ಮಾಡುವ ಮಾಹಿತಿ ಅರಿತಿದ್ದ ಪೊಲೀಸರು ಕಾರನ್ನು ತಡೆದಿದ್ದರು. ಈ ವೇಳೆ ಚಾಲಕ ಕಾರು ನಿಲ್ಲಿಸಿ ಕತ್ತಲಲ್ಲಿ ಪರಾರಿಯಾಗಿದ್ದ. ಬಳಿಕ ಕಾರಿನಲ್ಲಿದ್ದ ಐಇಡಿಯನ್ನು ಪೊಲೀಸರು ಸ್ಫೋಟಗೊಳಿಸಿ, ದೊಡ್ಡ ಮಟ್ಟದ ದಾಳಿಯೊಂದು ವಿಫಲಗೊಳ್ಳುವಂತೆ ಮಾಡಿದ್ದರು. ಪೊಲೀಸರ ಈ ಕಾರ್ಯಕ್ಕೆ ದೇಶದಾದ್ಯಂತ ಭಾರೀ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com