ಲಡಾಕ್ ಬಿಕ್ಕಟ್ಟು:  ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಿದ ವಾಯುಪಡೆ
ಲಡಾಕ್ ಬಿಕ್ಕಟ್ಟು:  ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಿದ ವಾಯುಪಡೆ

ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆ

ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ. 

ಅರುಣಾಚಲ ಪ್ರದೇಶ: ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ. 

ಶಿಲ್ಲಾಂಗ್ ಬೇಸ್ ನ ರಕ್ಷಣಾ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಿಹೆಚ್-47 ಚಿನೂಕ್ ಮಲ್ಟಿ ಮಿಷನ್ ಹೆಲಿಕಾಫ್ಟರ್ ಗಳು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಕಾರ್ಯಾಚರಣೆಯಲ್ಲಿದ್ದು, ದೇಶದ ಸೇವೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹೆಲಿಕಾಫ್ಟರ್ ಗಳು ಐಎಎಫ್ ಗೆ ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಸಾಟಿಯಿಲ್ಲದ ಏರ್ಲಿಫ್ಟ್ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.

ಈಗಿರುವ ಎಂಐ-17 ಗೆ ಹೋಲಿಕೆ ಮಾಡಿದರೆ ಈ ಚಿನೂಕ್ ಹೆಲಿಕಾಫ್ಟರ್ ಗಳು ಅತಿ ಎತ್ತರದ ಪ್ರದೇಶಗಳಲ್ಲಿ ಹಾರಾಟ ಮಾಡುವ ಸಾಮರ್ಥ್ಯಗಳನ್ನು ಹೊಂದಿದ್ದು ಎಂಐ-17 ಗಿಂತಲೂ ಹೆಚ್ಚಿನ ತೂಕ ಹೊತ್ತು ಸಾಗುವ ಸಾಮರ್ಥ್ಯವಿದೆ.

ಎಂಐ-17 24 ಪ್ರಯಾಣಿಕರು ಹಾಗೂ ಸಣ್ಣ ವಾಹನಗಳನ್ನು ಸೇರಿದಂತೆ 4,000 ಕೆಜಿ ಆಂತರಿಕ ಪೇಲೋಡ್ ಸಾಮರ್ಥ್ಯ ಹೊಂದಿದ್ದರೆ ಚಿನೂಕ್ ಹೆಲಿಕಾಫ್ಟರ್ ಗಳು 22,000lb (10,000 ಕೆ.ಜಿ)ಯಷ್ಟು ಸರಕು ಅಥವಾ ಸಂಪೂರ್ಣವಾಗಿ ಶಸ್ತ್ರಸಜ್ಜಿತಗೊಂಡಿರುವ 55 ಸೇನಾ ತುಕಡಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಅರುಣಾಚಲ ಪ್ರದೇಶದ ಭಾಗದಲ್ಲಿ ಈ ಚಿನೂಕ್ ಹೆಲಿಕಾಫ್ಟರ್ ಗಳನ್ನು ನಿಯೋಜಿಸುತ್ತಿರುವುದು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಮಾದರಿಯ ಒಂದು ಹೆಲಿಕಾಫ್ಟರ್ ನ್ನು ಗುರುವಾರ ಅಗತ್ಯ ಸರಕುಗಳೊಂದಿಗೆ ಅರುಣಾಚಲ ಪ್ರದೇಶದ ಚಂಗ್ಲಾಂಗ್ ನ ವಿಜೋಯ್ ನಗರ್ ಸರ್ಕಲ್ ಗೆ ಕಳುಹಿಸಲಾಗಿತ್ತು. 

Related Stories

No stories found.

Advertisement

X
Kannada Prabha
www.kannadaprabha.com