ಅಧಿಕಾರಿಗೆ ಕೊರೋನಾ ಸೋಂಕು: ಸಂಸತ್ತಿನ ಎರಡು ಮಹಡಿ ಸೀಲ್ ಡೌನ್

ರಾಜ್ಯಸಭಾ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಶುಕ್ರವಾರ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಸಂಸತ್ತು ಸಂಕೀರ್ಣದ ಎರಡು ಮಹಡಿಯನ್ನು ಸೀಲ್ ಡೌನ್ ಮಾಡಲಾಗಿದೆ.

Published: 29th May 2020 12:32 PM  |   Last Updated: 29th May 2020 12:37 PM   |  A+A-


Parliament

ಸಂಸತ್ತು

Posted By : Sumana Upadhyaya
Source : PTI

ನವದೆಹಲಿ: ರಾಜ್ಯಸಭಾ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಶುಕ್ರವಾರ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಸಂಸತ್ತು ಸಂಕೀರ್ಣದ ಎರಡು ಮಹಡಿಯನ್ನು ಸೀಲ್ ಡೌನ್ ಮಾಡಲಾಗಿದೆ.

ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದ ನಿರ್ದೇಶಕ ಮಟ್ಟದ ಅಧಿಕಾರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಂಸತ್ತಿನ ಇತರ ಸಿಬ್ಬಂದಿಗಳಲ್ಲಿ ಆತಂಕ ಉಂಟುಮಾಡಿದೆ. ಅವರ ಕುಟುಂಬಸ್ಥರಿಗೂ ಸೋಂಕು ತಗಲಿದೆ.

ಸಂಸತ್ತಿನ ಸಿಬ್ಬಂದಿಗೆ ಕೊರೋನಾ ವಕ್ಕರಿಸಿದ ನಾಲ್ಕನೇ ಪ್ರಕರಣ ಇದಾಗಿದ್ದರೆ ಅಧಿಕಾರಿ ಮಟ್ಟದಲ್ಲಿ ಸಂಸತ್ತಿನ ಸಿಬ್ಬಂದಿಗೆ ಕೊರೋನಾ ಸೋಂಕು ತಗಲಿರುವ ಎರಡನೇ ಪ್ರಕರಣ ಇದಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp