ದೆಹಲಿ ಏಮ್ಸ್ ನಲ್ಲಿ ಮತ್ತೆ ಇಬ್ಬರು ವೈದ್ಯರು ಸೇರಿದಂತೆ 11 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು!

ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್ ನಲ್ಲಿ ಇಬ್ಬರು ವೈದ್ಯರು ಸೇರಿದಂತೆ ಮತ್ತೆ 11 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆ ಮೂಲಕ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾದ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆ  206ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್ ನಲ್ಲಿ ಇಬ್ಬರು ವೈದ್ಯರು ಸೇರಿದಂತೆ ಮತ್ತೆ 11 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆ ಮೂಲಕ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾದ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆ  206ಕ್ಕೆ ಏರಿಕೆಯಾಗಿದೆ.

ಆಸ್ಪತ್ರೆಯ ಇಬ್ಬರು ರೆಸಿಡೆಂಟ್ ಡಾಕ್ಟರ್ ಗಳು, ಸೇರಿದಂತೆ 11 ಮಂದಿ ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಆ ಮೂಲಕ ಫೆಬ್ರವರಿ 1ರಿಂದ ಈ ವರೆಗೂ ಏಮ್ಸ್ ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾದ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆ 206ಕ್ಕೆ  ಏರಿಕೆಯಾಗಿದೆ. ಈ ಪೈಕಿ ಒಟ್ಟಾರೆಯಾಗಿ 10 ಮಂದಿ ವೈದ್ಯರು, ಇಬ್ಬರು ಆಡಳಿತ ವರ್ಗದ ಸಿಬ್ಬಂದಿಗಳು, 26 ನರ್ಸ್ ಗಳು, 9 ಮಂದಿ ತಂತ್ರಜ್ಞರು, ಆಸ್ಪತ್ರೆ ಕ್ಯಾಂಟೀನ್ ನ 5 ಮಂದಿ, 49 ಮಂದಿ ಆಸ್ಪತ್ರೆಯ ಅಟೆಂಡೆಂಟ್ಸ್ ಗಳು, 34 ಮಂದಿ ಸ್ಯಾನಿಟೈಸೇಷನ್ ಸಿಬ್ಬಂದಿಗಳು 69 ಮಂದಿ  ಭದ್ರತಾ ಸಿಬ್ಬಂದಿಗಳಿಗೆ ಸೋಂಕು ಹಬ್ಬಿದೆ.

ಈ ಪೈಕಿ 150ಕ್ಕೂ ವೈದ್ಯಕೀಯ ಸಿಬ್ಬಂದಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈಗಾಗಲೇ ಕರ್ತವ್ಯಕ್ಕೆ ಕೂಡ ನಿಯೋಜನೆಯಾಗಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ವೈದ್ಯಕೀಯ ನಿರೀಕ್ಷಕ ಡಾ.ಡಿಕೆ ಶರ್ಮಾ ಹೇಳಿದ್ದಾರೆ. ಅಂತೆಯೇ ನಾವು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು  ಕೈಗೊಂಡಿದ್ದೇವೆ. ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರನ್ನು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಎಲ್ಲರನ್ನೂ ಐಸೋಲೇಷನ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.  ಕಳೆದ ಮೂರು ದಿನಗಳಲ್ಲಿ ದೆಹಲಿಯಲ್ಲಿ 64 ಆರೋಗ್ಯ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com