ಭಕ್ತಾದಿಗಳ ಅನುಪಸ್ಥಿತಿಯಲ್ಲಿ ನಡೆಯಲಿದೆ ಪುರಿ ರಥಯಾತ್ರೆ: ನೇರ ಪ್ರಸಾರಕ್ಕೆ ವ್ಯವಸ್ಥೆ

ಭಕ್ತಾದಿಗಳ ಅನುಪಸ್ಥಿತಿಯನ್ನು ಒಡಿಶಾ ಸರ್ಕಾರ ಖಚಿತಪಡಿಸಿದರೆ ಒಡಿಶಾದ ಜಗನ್ನಾಥ ರಥಯಾತ್ರೆ ನಡೆಸಬಹುದೆಂದು ಪುರಿ ಗಜಪತಿ ದಿವ್ಯ ಸಿಂಗ ದೇವ್ ಹೇಳಿದ್ದಾರೆ. 
ಭಕ್ತಾದಿಗಳ ಅನುಪಸ್ಥಿತಿಯಲ್ಲಿ ನಡೆಯಲಿದೆ ಪುರಿ ರಥಯಾತ್ರೆ: ನೇರ ಪ್ರಸಾರಕ್ಕೆ ವ್ಯವಸ್ಥೆ
ಭಕ್ತಾದಿಗಳ ಅನುಪಸ್ಥಿತಿಯಲ್ಲಿ ನಡೆಯಲಿದೆ ಪುರಿ ರಥಯಾತ್ರೆ: ನೇರ ಪ್ರಸಾರಕ್ಕೆ ವ್ಯವಸ್ಥೆ

ಭುವನೇಶ್ವರ್: ಭಕ್ತಾದಿಗಳ ಅನುಪಸ್ಥಿತಿಯನ್ನು ಒಡಿಶಾ ಸರ್ಕಾರ ಖಚಿತಪಡಿಸಿದರೆ ಒಡಿಶಾದ ಜಗನ್ನಾಥ ರಥಯಾತ್ರೆ ನಡೆಸಬಹುದೆಂದು ಪುರಿ ಗಜಪತಿ ದಿವ್ಯ ಸಿಂಗ ದೇವ್ ಹೇಳಿದ್ದಾರೆ. 

ಪುರಿ ಜಗನ್ನಾಥ ದೇವಾಲಯ ವ್ಯವಸ್ಥಾಪಕ ಸಮಿತಿ ಸಭೆಯ ನಂತರ ಮಾತನಾಡಿರುವ ಪುರಿ ಗಜಪತಿ ದಿವ್ಯ ಸಿಂಗ ದೇವ್, ಸರ್ಕಾರ ಅನುಮತಿ ನೀಡಿದರೆ ಕೆಲವೇ ಕೆಲವು ಸೇವಕರ ಹಾಜರಿಯಲ್ಲಿ, ಭಕ್ತಾದಿಗಳ ಅನುಪಸ್ಥಿತಿಯಲ್ಲಿ ರಥಯಾತ್ರೆ ನಡೆಸಬಹುದೆಂಬ ಅಭಿಪ್ರಾಯ ತಿಳಿಸಿದ್ದಾರೆ.

ರಥಯಾತ್ರೆ, ಬಹುದ ಯಾತ್ರೆಗಳನ್ನು ಸೇವಕರು, ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ರಥಬೀದಿಯಲ್ಲಿ ನಡೆಯಲಿದ್ದು, ಸ್ನಾನ ಯಾತ್ರೆಯನ್ನು ಜೂ.05 ರಂದು ನಿಗದಿಪಡಿಸಲಾಗಿದೆ ಇದನ್ನು ದೇವಾಲಯದ ಪ್ರಾಂಗಣದಲ್ಲೇ ನಡೆಸಬಹುದಾಗಿದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ನಿರ್ಧಾರವಾಗಿದೆ. 

ಇನ್ನು ಸ್ನಾನ ಯಾತ್ರೆ ಹಾಗೂ ರಥ ಯಾತ್ರೆಗಳನ್ನು ನೇರ ಪ್ರಸಾರಕ್ಕೆ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com