10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್: ಇನ್ನು ಮುಂದೆ ಕರೆ ಮಾಡುವಾಗ 0 ಸೇರಿಸಿ

ಈಗಿರುವ 10 ಸಂಖ್ಯೆಯ ಮೊಬೈಲ್ ನಂಬರ್'ನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಕ್ರವಾರ ಶಿಫಾರಸು ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಈಗಿರುವ 10 ಸಂಖ್ಯೆಯ ಮೊಬೈಲ್ ನಂಬರ್'ನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಕ್ರವಾರ ಶಿಫಾರಸು ಮಾಡಿದೆ. 

ಇದರಿಂದ ಈಗಿರುವ ಮೊಬೈಲ್ ಸಂಖ್ಯೆಯಲ್ಲಿ ಬೇರಾವುದೇ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ಸ್ಥಿರ ದೂರವಾಣಿಯಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮುನ್ನ 0ವನ್ನು ಡಯಲ್ ಮಾಡಬೇಕು ಎಂದು ತಿಳಿಸಿದೆ. 

ಮೊಬೈಲ್ ನಿಂದ ಮೊಬೈಲ್'ಗೆ ಅಥವಾ ಮೊಬೈಲ್ ನಿಂದ ಸ್ಥಿರ ದೂರವಾಣಿಗೆ ಕರೆ ಮಾಡುವಾಗ 0 ಯನ್ನು ಡಯಲ್ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಹಾಲಿ ಲಭ್ಯವಿರುವ ಮೊಬೈಲ್ ಹಾಗೂ ಸ್ಥಿರ ದೂರವಾಣಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟ್ರಾಯ್ ಈ ಶಿಫಾರಸು ಮಾಡಿದೆ. ಹಾಲಿ ಕಚೇರಿಯಲ್ಲಿ ನೆಟ್ ವರ್ಕ್ ನಲ್ಲಿರುವ ಲ್ಯಾಂಡ್ ಲೈನ್ ಗಳ ಮೂಲಕಮೊಬೈಲ್ ಗೆ ಕರೆ ಮಾಡಲು 0 ಡಯಲ್ ಮಾಡುವ ವ್ಯವಸ್ಥೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com