ವಿಶ್ವದಲ್ಲಿ ಕೊರೋನಾ 62 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 3.72 ಲಕ್ಷ ಸಾವು, 7ನೇ ಸ್ಥಾನದಲ್ಲಿ ಭಾರತ!

ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್(ಕೋವಿಡ್-19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 62 ಲಕ್ಷದಾಟಿದ್ದು, 3.72 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್(ಕೋವಿಡ್-19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 62 ಲಕ್ಷದಾಟಿದ್ದು, 3.72 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

ವಿಶ್ವಾದ್ಯಂತ 62,08,200 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 3,72,052 ಜನರು ಸಾವನ್ನಪ್ಪಿದ್ದಾರೆ.

ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಅಮೆರಿಕ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಎರಡನೇ ಮತ್ತು ರಷ್ಯಾ ಮೂರನೇ ಸ್ಥಾನದಲ್ಲಿದೆ. ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಬ್ರಿಟನ್ ಎರಡು, ಇಟಲಿ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿಯೂ ಕರೋನಾ ವೈರಸ್ ಹರಡುತ್ತಿದೆ ಮತ್ತು ಇದು ವಿಶ್ವದಾದ್ಯಂತ ಅತಿ ಹೆಚ್ಚು ಸೋಂಕುಗಳನ್ನು ಹೊಂದಿರುವ ದೇಶಗಳಲ್ಲಿ ಏಳನೇ ಸ್ಥಾನವನ್ನು ತಲುಪಿದೆ. ಭಾರತದಲ್ಲಿ 1,89,765 ಜನರು ಬಾಧಿತರಾಗಿದ್ದು, 5,390 ಜನರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಈವರೆಗೆ 18,22,460 ಸೋಂಕಿತರಿದ್ದು, 1,05,695 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ ಐದು ಲಕ್ಷದ ದಾಟಿದೆ. ಒಟ್ಟಾರೆ 28,8872 ಜನರು ಸಾವನ್ನಪ್ಪಿದ್ದಾರೆ.

ರಷ್ಯಾದಲ್ಲಿ 4,05,843 ಜನರು ಸೋಂಕಿಗೆ ಒಳಗಾಗಿದ್ದು, 4693 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ನಲ್ಲಿ 2,74,762 ಜನರು ಸೋಂಕಿಗೆ ಒಳಗಾಗಿದ್ದು, 38,489 ಜನರು ಸಾವನ್ನಪ್ಪಿದ್ದಾರೆ. ಇನ್ನು ಇಟಲಿಯಲ್ಲಿ ಈವರೆಗೆ 33,415 ಜನರು ಸಾವನ್ನಪ್ಪಿದರೆ, 2,33,019 ಜನರು ಸೋಂಕಿಗೆ ಒಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com