ಮಾಜಿ ಸುಪ್ರೀಂ ನ್ಯಾಯಮೂರ್ತಿಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಕೃತಿ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ದವಲ್ಲದ ಉಪಾಖ್ಯಾನಗಳಿಂದ ಕೂಡಿರುವ ವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಬಿಡುಗಡೆಯಾಗಿದೆ.

Published: 31st May 2020 05:05 PM  |   Last Updated: 31st May 2020 05:05 PM   |  A+A-


ಕೆ ಜಿ ಬಾಲಕೃಷ್ಣನ್ ರಿಂದ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಕೃತಿ ಬಿಡುಗಡೆ

Posted By : Raghavendra Adiga
Source : PTI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ದವಲ್ಲದ ಉಪಾಖ್ಯಾನಗಳಿಂದ ಕೂಡಿರುವ ವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಬಿಡುಗಡೆಯಾಗಿದೆ.

"Narendra Modi-Harbinger of Prosperity & Apostle of World Peace", ಎನ್ನುವ ಹೆಸರಿನ ಪುಸ್ತಕವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಬಿಡುಗಡೆ ಮಾಡಿದ್ದಾರೆ.

 ಲಾಕ್‌ಡೌನ್ ಮಧ್ಯೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದು ಭಾರತ ಮತ್ತು ಯುಎಸ್ ಎರಡೂ ರಾಷ್ಟ್ರಗಳಲ್ಲಿನ ಗಣ್ಯರು ಈ ವೇಳೆ ಹಾಜರಿದ್ದರು. 

ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ಅಧ್ಯಕ್ಷ ಮತ್ತು ಅಖಿಲ ಭಾರತ ಬಾರ್ ಅಸೋಸಿಯೇಶನ್ ಅಧ್ಯಕ್ಷ  ಆದಿಶ್ ಸಿ ಅಗರ್‌ವಾಲಾ, ಮೆರಿಕಾದ ಲೇಖಕ ಮತ್ತು ಕವಿ ಎಲಿಸಬೆತ್ ಹೊರಾನ್ ಜತೆಯಾಗಿ ಈ ಪುಸ್ತಕ ಬರೆದಿದ್ದು "ಮೋದಿಯವರ ಬಾಲ್ಯ ಮತ್ತು ಆರಂಭಿಕ ಜೀವನದ ಅಪರೂಪದ ಛಾಯಾಚಿತ್ರಗಳು ಜೀವನಚರಿತ್ರೆಯು ಚಹಾವನ್ನು ಮಾರಿದ ಹುಡುಗನೊಬ್ಬ ಎರಡನೇ ಬಾರಿ ದೇಶದ ಪ್ರಧಾನಿಯಾದವರೆಗೆ ಜೀವನವನ್ನು ಅದ್ಭುತವಾಗಿ ಚಿತ್ರಿಸಿದೆ.

ಕೆಲ ಅತ್ಯಪರೂಪದ ಸಂಗತಿಗಳನ್ನು ಒಳಗೊಂಡಿರುವ ಈ ಕೃತಿ ಹಾರ್ಡ್‌ಕವರ್ ಮತ್ತು ಇ-ಬುಕ್ ಎಂಬ ಎರಡು ಸ್ವರೂಪಗಳಲ್ಲಿ ಲಭ್ಯವಿದೆ  ಇಷ್ಟೇ ಅಲ್ಲದೆ ಇಂಗ್ಲಿಷ್, ಅರೇಬಿಕ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಮ್ಯಾಂಡರಿನ್, ರಷ್ಯನ್ ಮತ್ತು ಸ್ಪ್ಯಾನಿಷ್ ಸೇರಿ ಹಲವು ವಿದೇಶೀ ಭಾಷೆಗಳಲ್ಲಿ,  ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು ಸೇರಿ ಹಲವು ಭಾರತೀಯ ಭಾಷೆಯಲ್ಲಿ ಲಭ್ಯ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp