ಉತ್ತರ್ ಖಂಡ್: ಸಚಿವ ಸತ್ಪಾಲ್ ಮಹಾರಾಜ್ ಪತ್ನಿಗೆ ಕೋವಿಡ್-19 ಪಾಸಿಟಿವ್!

ಉತ್ತರ್ ಖಂಡ್ ಕ್ಯಾಬಿನೆಟ್ ಸಚಿವ ಸತ್ಪಲ್ ಮಹಾರಾಜ್ ಪತ್ನಿ ಅಮೃತಾ ರಾವತ್ ಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸತ್ಪಲ್ ಮಹಾರಾಜ್ ಪತ್ನಿ ಅಮೃತಾ ರಾವತ್
ಸತ್ಪಲ್ ಮಹಾರಾಜ್ ಪತ್ನಿ ಅಮೃತಾ ರಾವತ್

ಡೆಹ್ರಾಡೂನ್:  ಉತ್ತರ್ ಖಂಡ್ ಕ್ಯಾಬಿನೆಟ್ ಸಚಿವ ಸತ್ಪಲ್ ಮಹಾರಾಜ್ ಪತ್ನಿ ಅಮೃತಾ ರಾವತ್ ಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಡೆಹ್ರಾಡೂನ್ ನಲ್ಲಿನ ಖಾಸಗಿ ಲ್ಯಾಬ್ ವೊಂದರಲ್ಲಿ ಅಮೃತಾ ರಾವ್ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವ್ ವರದಿ ಬಂದಿದೆ.

ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶಿಷ್ ಶ್ರೀವಾಸ್ತವ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ 

ಶನಿವಾರ ಉತ್ತರ್ ಖಂಡ್ ನಲ್ಲಿ 22 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಉತ್ತರ್ ಖಂಡ್ ನಲ್ಲಿ ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com