ಕೊರೋನಾ ಗೆ ಸೆಡ್ಡು ಹೊಡೆದ ಚೆನ್ನೈ: ಶೇ.95ರಷ್ಟು ಸೋಂಕಿತರು ಗುಣಮುಖ, ಶೇ.3ರಷ್ಟು ಮಾತ್ರ ಸಕ್ರಿಯ ಪ್ರಕರಣಗಳು!
ಮಾರಕ ಕೊರೋನಾ ವೈರಸ್ ಸೋಂಕಿಗೆ ವ್ಯಾಪಕವಾಗಿ ತುತ್ತಾಗಿದ್ದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಸೋಂಕು ತಹಬದಿಗೆ ಬಂದಿದ್ದು, ನಗರದಲ್ಲಿನ ಶೇ.95ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
Published: 01st November 2020 12:56 PM | Last Updated: 01st November 2020 12:56 PM | A+A A-

ಸಂಗ್ರಹ ಚಿತ್ರ
ಚೆನ್ನೈ: ಮಾರಕ ಕೊರೋನಾ ವೈರಸ್ ಸೋಂಕಿಗೆ ವ್ಯಾಪಕವಾಗಿ ತುತ್ತಾಗಿದ್ದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಸೋಂಕು ತಹಬದಿಗೆ ಬಂದಿದ್ದು, ನಗರದಲ್ಲಿನ ಶೇ.95ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ತಮಿಳುನಾಡಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಅಕ್ಟೋಬರ್ 31 ರವರೆಗೆ ಬಿಡುಗಡೆ ಮಾಡಲಾದ ವರದಿಯಂತೆ ಚೆನ್ನೈನಲ್ಲಿ ಚೇತರಿಕೆ ಪ್ರಮಾಣ ಶೇ.95ಕ್ಕೆ ಏರಿಕೆಯಾಗಿದೆ. ಅಂತೆಯೇ ಶೇ.3ರಷ್ಟು ಮಾತ್ರ ಸಕ್ರಿಯ ಪ್ರಕರಣಗಳಿದ್ದು, ಚೆನ್ನೈನ ಕಂಟೈನ್ ಮೆಂಟ್ ಝೋನ್ ನಲ್ಲಿದ್ದ ಶೋಲಿಂಗನಲ್ಲೂರಿನಲ್ಲಿ ಚೇತರಿಕೆ ಪ್ರಮಾಣ ಶೇ.97ಕ್ಕೆ ಏರಿಕೆಯಾಗಿದೆ. ಚೆನ್ನನಲ್ಲಿ ಪ್ರಸ್ತುತ ಪ್ರತಿದಿನ ಸರಾಸರಿ ಸುಮಾರು 700 ಪ್ರಕರಣಗಳು ದಾಖಲಾಗುತ್ತಿದ್ದು, ಇದೇ ರೀತಿಯ ಬೆಳವಣಿಗೆ ಮುಂದುವರೆದರೆ ಚೇತರಿಕೆ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತೆಯೇ ಚೆನ್ನೈ ನಗರದಲ್ಲಿ ಪ್ರತಿದಿನ ಸುಮಾರು 12,000 ಜನರನ್ನು ಪರೀಕ್ಷಿಸಲಾಗುತ್ತಿದ್ದು, ಸಕಾರಾತ್ಮಕತೆ ಪ್ರಮಾಣವು ಶೇಕಡಾ 6 ರಷ್ಟಿದೆ. ಇದು ಉತ್ತಮ ಸಂಕೇತವಾಗಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆಯ ತಜ್ಞರೊಬ್ಬರು ಹೇಳಿದ್ದಾರೆ. ಅಕ್ಟೋಬರ್ 30 ರಂದು ಸುಮಾರು 14,463 ಮಂದಿ ಕೋವಿಡ್ ಪರೀಕ್ಷೆಗೊಳಪಟ್ಟಿದ್ದರು. ಅಕ್ಟೋಬರ್‌ನಲ್ಲಿ ಕೋವಿಡ್ ಕೇರ್ ಶಿಬಿರದಲ್ಲಿ ಸುಮಾರು 20,000 ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ನಗರದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟು ಜನರು ಈ ವರೆಗೂ ಫೀವರ್ ಕ್ಲಿನಿಕ್ ಗೆ ಹಾಜರಾಗಿ ಪರೀಕ್ಷೆಗೊಳಪಟ್ಟಿದ್ದಾರೆ. ಇಲ್ಲಿಯವರೆಗೆ ಚೈನ್ನೈನ 65,025 ಫೀವರ್ ಕ್ಲಿನಿಕ್ ನಲ್ಲಿ ಒಟ್ಟು 32,51,196 ಜನರು ಪರೀಕ್ಷೆಗೊಳಪಡಿಸಿದ್ದಾರೆ.
ಈ ಪೈಕಿ 1,83,868 ಮಂದಿಯಲ್ಲಿ ಇನ್ ಫ್ಲುಯೆಂಜಾ ಲಕ್ಷಣದಿಂದಿದ್ದರು. ಈ ಪೈಕಿ 28,092 ಮಂದಿಯಲ್ಲಿ ಮಾತ್ರ ಕೊರೋನಾ ಸೋಂಕು ದೃಢವಾಗಿದೆ. ಅಂತೆಯೇ ಚೆನ್ನೈನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಅಕ್ಚೋಬರ್ ನಲ್ಲಿ ಸಾವಿನ ಸಂಖ್ಯೆ ಕೆಲದಿನಗಳಲ್ಲಿ ಒಂದಂಕಿಯಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.