ಗಿಲ್ಗಿಟ್-ಬಾಲ್ಟಿಸ್ತಾನ್ ವಿಚಾರದಲ್ಲಿ ಪಾಕ್ ನಡೆಯನ್ನು ಖಂಡಿಸಿದ ಭಾರತ
ತನ್ನ ಅಕ್ರಮ ಕೆಲಸವನ್ನು ಮರೆಮಾಚುವ ಉದ್ದೇಶದಿಂದ ಪಾಕಿಸ್ತಾನ, ಗಿಲ್ಗಿಟ್- ಬಾಲ್ಟಿಸ್ತಾನ್ ನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸಿದೆ. ಆದರೆ, ಅಲ್ಲಿನ ಜನರು ಏಳು ದಶಕಗಳಿಂದಲೂ ಎದುರಿಸುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ, ಶೋಷಣೆ ಮತ್ತು ಸ್ವಾತಂತ್ರ್ಯ ನಿರಾಕರಣೆಯನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
Published: 01st November 2020 10:38 PM | Last Updated: 01st November 2020 10:38 PM | A+A A-

ಭಾರತ-ಪಾಕಿಸ್ತಾನದ ರಾಷ್ಟ್ರ ಧ್ವಜಗಳು
ನವದೆಹಲಿ: ತನ್ನ ಅಕ್ರಮ ಕೆಲಸವನ್ನು ಮರೆಮಾಚುವ ಉದ್ದೇಶದಿಂದ ಪಾಕಿಸ್ತಾನ, ಗಿಲ್ಗಿಟ್- ಬಾಲ್ಟಿಸ್ತಾನ್ ನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸಿದೆ. ಆದರೆ, ಅಲ್ಲಿನ ಜನರು ಏಳು ದಶಕಗಳಿಂದಲೂ ಎದುರಿಸುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ, ಶೋಷಣೆ ಮತ್ತು ಸ್ವಾತಂತ್ರ್ಯ ನಿರಾಕರಣೆಯನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಂದು ಮಧ್ಯಾಹ್ನ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನವನ್ನು ಘೋಷಿಸುತ್ತಿದ್ದಂತೆ ಅದರ ಅಕ್ರಮ ಕೆಲಸ ನಡೆಯುತ್ತಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡುವಂತೆ ನಾವು ಕರೆ ನೀಡಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಿಲ್ಗಿಟ್- ಬಾಲಿಸ್ಟಾನ್ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದೆ. ಆದರೆ, 1947 ಪಾಕಿಸ್ತಾನ ಇಬ್ಬಾಗವಾದ ನಂತರ ಅಕ್ರಮವಾಗಿ ಅದನ್ನು ವಶಪಡಿಸಿಕೊಂಡಿದೆ.ನಂತರ ಅದನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ -ಬಾಲ್ಟಿಸ್ತಾನ್ ಎಂದು ಪಾಕಿಸ್ತಾನ ಪ್ರತ್ಯೇಕಿಸಿದೆ.
ಗಿಲ್ಗಿಟ್- ಬಾಲ್ಟಿಸ್ತಾನ್ ಎಂದು ಕರೆಯಲ್ಪಡುವ ಪ್ರದೇಶ ಸೇರಿದಂತೆ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರ, ಲಡಾಖ್, ಕಾನೂನು ಪ್ರಕಾರ ಭಾರತದ ಭಾಗವಾಗಿವೆ. 1947ರಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಈ ಭಾರತೀಯ ಪ್ರಾಂತ್ಯಗಳ ಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವ ಬದಲು, ಪಾಕಿಸ್ತಾನ ತನ್ನ ಅಕ್ರಮ ಕೆಲಸ ಮಾಡುತ್ತಿರುವ ಎಲ್ಲಾ ಪ್ರದೇಶಗಳನ್ನು ಕೂಡಲೇ ಖಾಲಿ ಮಾಡುವಂತೆ ನಾವು ಕರೆ ನೀಡುವುದಾಗಿ ಸಚಿವಾಲಯ ತಿಳಿಸಿದೆ.