ಸಿಂಧಿಯಾರನ್ನು ನಾಯಿ ಅಂತಾ ಕರೆದಿಲ್ಲ: ಕಮಲ್ ನಾಥ್ ಸ್ಪಷ್ಟನೆ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ನನನ್ನು ನಾಯಿ ಎಂದು ಕರೆದಿದ್ದಾರೆ ಎಂದು ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಭಾನುವಾರ ನಿರಾಕರಿಸಿರುವ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ತಾವು ಆ ರೀತಿಯಲ್ಲಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ಕಮಲ್ ನಾಥ್
ಕಮಲ್ ನಾಥ್

ಭೂಪಾಲ್:  ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ನನನ್ನು ನಾಯಿ ಎಂದು ಕರೆದಿದ್ದಾರೆ ಎಂದು ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಭಾನುವಾರ ನಿರಾಕರಿಸಿರುವ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ತಾವು ಆ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ಅಶೋಕ್ ನಗರ ಕ್ಷೇತ್ರದ ಜನರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಇತ್ತೀಚಿಗೆ ವಿವಾದಕ್ಕೆ ಕಾರಣವಾಗಿದ್ದ ಐಟಂ ಹೇಳಿಕೆಯ ಕುರಿತಂತೆಯೂ ಕಮಲ್ ನಾಥ್ ವಿವರಣೆ ನೀಡಿದ್ದಾರೆ.

ಅಶೋಕ್ ನಗರದಲ್ಲಿ ನನ್ನನ್ನು ಕಮಲ್ ನಾಥ್ ನಾಯಿ ಎಂದು ಕರೆದಿದ್ದಾರೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ನಿನ್ನೆ ಆರೋಪಿಸಿದ್ದರು. ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ನಾಥ್, ಆ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ ಎಂದರು.

ಸಾಡೋರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಂಧಿಯಾ, ಹೌದು. ನಾನು ನಾಯಿ ಏಕೆಂದರೆ ನಾನು ಜನರ ಸೇವಕ, ಶ್ವಾನ ತನ್ನ ಮಾಲೀಕರನ್ನು ರಕ್ಷಿಸುತ್ತದೆ. ಕೆಲವರು ಭ್ರಷ್ಟಾಚಾರ ಮತ್ತು ಕೆಟ್ಟ ಉದ್ದೇಶದ  ನೀತಿಗಳನ್ನು ಜಾರಿಗೆ ತಂದರೆ ಈ ನಾಯಿ ಅಂತಹವರ ವಿರುದ್ಧ ದಾಳಿ ಮಾಡಲಿದೆ ಎಂದು ಹೇಳಿದ್ದರು.

ಮಧ್ಯಪ್ರದೇಶ ಸಚಿವೆ ಇಮಾರ್ತಿ ದೇವಿಯನ್ನು ಐಟಂ ಎಂದು ಕರೆದ ಬಗ್ಗೆ ಕಮಲ್ ನಾಥ್ ಕ್ಷಮೆ ಕೋರಿದ್ದಾರೆ. ಅನೇಕ ವರ್ಷಗಳ ಕಾಲ ಲೋಕಸಭೆಯಲ್ಲಿದ್ದು, ನಮ್ಮ ಸೀಟುಗಳನ್ನುಐಟಂ ನಂಬರ್ -1, ಐಟಂ ನಂಬರ್ -2, ಹೀಗೆ ಬರೆಯಲಾಗಿತ್ತು. ಆ ಭಾಷೆಯಲ್ಲಿ ಪರಿಣಿತನಾಗಿದ್ದೆ. ಯಾರೊಬ್ಬರನ್ನು ನೋವಿಸುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ಅದಕ್ಕಾಗಿ ವಿಷಾಧಿಸುವುದಾಗಿ ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com