ಉತ್ತರಪ್ರದೇಶ: ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆಯರು, ವಿಡಿಯೋ!

ಉತ್ತರಪ್ರದೇಶದ ಜಲೌನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನನ್ನು ಮಹಿಳೆಯರಿಬ್ಬರು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಉತ್ತರಪ್ರದೇಶದ ಜಲೌನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನನ್ನು ಮಹಿಳೆಯರಿಬ್ಬರು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಹಿಳೆಯರು ಅನುಜ್ ಮಿಶ್ರಾ ತಮ್ಮ ಜೊತೆ ಮೊಬೈಲ್ ನಲ್ಲಿ ಅಶ್ಲೀಲವಾಗಿ ಮಾಡಿದ್ದಾರೆ ಎಂದು ಆರೋಪಿ ರಸ್ತೆಯಲ್ಲೇ ಬಟ್ಟೆಯನ್ನು ಹರಿದು ಚಪ್ಪಲಿಯಿಂದ ಹೊಡೆದು ಥಳಿಸಿದ್ದಾರೆ. 

ಈ ಸಂಬಂಧ ಮಾತನಾಡಿರುವ ಅನುಜ್ ಮಿಶ್ರಾ ತಮ್ಮ ಅಂಗಡಿಯಲ್ಲಿ ಈ ಮಹಿಳೆಯರು ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿ ಹಣ ಪಾವತಿಸಿಲ್ಲ. ಹಣ ನೀಡುವಂತೆ ಹೇಳಿದ್ದಕ್ಕೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಹಲ್ಲೆಗೆ ಸಂಬಂಧಿಸಿದಂತೆ ಅನುಜ್ ಮಹಿಳೆಯರಿಬ್ಬರ ವಿರುದ್ಧ ದೂರು ದಾಖಲಿಸಿದ್ದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com