ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ- ಸಂಜಯ್ ರಾವತ್ 

ಆರ್ ಜೆಡಿ ಯುವ ಮುಖಂಡ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್, ತೇಜಸ್ವಿ ಯಾದವ್
ಸಂಜಯ್ ರಾವತ್, ತೇಜಸ್ವಿ ಯಾದವ್

ಪುಣೆ: ಆರ್ ಜೆಡಿ ಯುವ ಮುಖಂಡ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬಿಹಾರದಲ್ಲಿ ಚುನಾವಣೆಯನ್ನು ನಾವು ಗಮನಿಸಿದರೆ ಯಂಗ್ ಸ್ಟಾರ್ ತೇಜಸ್ವಿ ಯಾದವ್ ಗೆ ಯಾರೂ ಕೂಡಾ ಬೆಂಬಲ ನೀಡುತ್ತಿಲ್ಲ. ಸಿಬಿಐ  ಹಾಗೂ ಆದಾಯ ತೆರಿಗೆ ಇಲಾಖೆ ಅವರ ಹಿಂದೆ ಬಿದಿದ್ದು, ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿದ್ದಾರೆ. ಆದರೂ ಕೂಡಾ ಇತರ ಪಕ್ಷಗಳಿಗೆ ಸವಾಲು ಸೃಷ್ಟಿಸಿದ್ದಾರೆ. ನಾಳೆ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಅಶ್ಚರ್ಯವಿಲ್ಲಾ, ಏಕೆಂದರೆ ಇದು ಸಾರ್ವಜನಿಕ ಭಾವನೆಯಾಗಿದೆ ಎಂದರು.

ಬಿಹಾರದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಕೋವಿಡ್-19 ಲಸಿಕೆ ಭರವಸೆ ಬಗ್ಗೆ ಚುನಾವಣಾ ಆಯೋಗದ ಅನುಮತಿ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್, ಚುನಾವಣಾ ಆಯೋಗ ಈಗ ಬಿಜೆಪಿಯ ಶಾಖೆಯಾಗಿದೆ. ಅದರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಸ್ಪಷ್ಟ ಉಲ್ಲಂಘನೆ ಎಂದು ನಂಬುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com