ಗಗನಕ್ಕೇರಿದ ಈರುಳ್ಳಿ ಬೆಲೆ: ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 100 ರೂ.!

 ದೇಶದಲ್ಲಿ ಈರುಳ್ಳಿ ಉತ್ಪಾದಿಸುವ ರಾಜ್ಯಗಳ ಪೈಕಿಯಲ್ಲಿ ಕರ್ನಾಟಕ ಮೂರನೇ ಅತಿದೊಡ್ಡ ರಾಜ್ಯವಾಗಿದ್ದರೂ ರಾಜಧಾನಿ ಬೆಂಗಳೂರಿನ ರಿಟೈಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ. ಈರುಳ್ಳಿ ಬೆಲೆ 100 ರೂ. ಆಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಭರಿಸುತ್ತಿದೆ.
ಈರುಳ್ಳಿ
ಈರುಳ್ಳಿ

ನವದೆಹಲಿ: ದೇಶದಲ್ಲಿ ಈರುಳ್ಳಿ ಉತ್ಪಾದಿಸುವ ರಾಜ್ಯಗಳ ಪೈಕಿಯಲ್ಲಿ ಕರ್ನಾಟಕ ಮೂರನೇ ಅತಿದೊಡ್ಡ ರಾಜ್ಯವಾಗಿದ್ದರೂ ರಾಜಧಾನಿ ಬೆಂಗಳೂರಿನ ರಿಟೈಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ. ಈರುಳ್ಳಿ ಬೆಲೆ 100 ರೂ. ಆಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಭರಿಸುತ್ತಿದೆ.

ಸರ್ಕಾರದಿಂದ ಪ್ರತಿದಿನ ಈರುಳ್ಳಿ ದರದ ಮೇಲೆ ಮೇಲ್ವಿಚಾರಣೆ ನಡೆಸುತ್ತಿದ್ದು, 114 ಸಿಟಿಗಳ ಪೈಕಿಯಲ್ಲಿ ರಾಜಸ್ಥಾನದ ಉದಯ್ ಪುರ ಮತ್ತು ಪಶ್ಚಿಮ ಬಂಗಾಳದ ಬಿರ್ ಬುಮ್ ಜಿಲ್ಲೆಯ ರಾಂಪುರ್ ಹತ್ ನಲ್ಲಿ ಮಾತ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 35 ರೂ.ಆಗಿದೆ.
ದೇಶಾದ್ಯಂತ ಸರಾಸರಿ ಈರುಳ್ಳಿಯ ಬೆಲೆ ಸೋಮವಾರ ಪ್ರತಿ ಕೆಜಿಗೆ 70 ರೂ. ಆಗಿತ್ತು.  

ಸರ್ಕಾರದ ಮಾಹಿತಿಯಂತೆ ದೇಶದಲ್ಲಿ ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಪ್ರತಿ ಕೆಜಿ 77 ರೂ. ಆಗಿದೆ. ದೆಹಲಿಯಲ್ಲೂ ಇದೇ ಪರಿಸ್ಥಿತಿ ಕಂಡುಬಂದಿತು. ಕೊಲ್ಕತ್ತಾದಲ್ಲಿ ಕೆಜಿ 70, ಚೆನ್ನೈನಲ್ಲಿ ಕೆಜಿಗೆ 72 ರೂ. ಆಗಿದೆ.

ಈರುಳ್ಳಿ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದರಿಂದ ಪೂರೈಕೆಯಲ್ಲಿ ಬಿಗುವಾಗಿದ್ದು, ಕಳೆದ ಕೆಲ ವಾರಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದೆ.

ಆದಾಗ್ಯೂ, ರಪ್ತು ನಿಷೇಧ, ದಾಸ್ತಾನು ಮಿತಿ, ಮತ್ತಿತರ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ.  ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕ ದೇಶದಲ್ಲಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com