ಗ್ಯಾಂಬ್ಲಿಂಗ್: ಕೊಹ್ಲಿ, ಗಂಗೂಲಿ, ಪ್ರಕಾಶ್ ರಾಜ್, ತಮನ್ನಾಗೆ ಮದ್ರಾಸ್ ಹೈಕೋರ್ಟ್ ನೋಟಿಸ್!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟ-ನಟಿಯರಾದ ಪ್ರಕಾಶ್ ರಾಜ್, ರಾಣಾ ಮತ್ತು ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 
ಕೊಹ್ಲಿ-ತಮನ್ನಾ-ಪ್ರಕಾಶ್ ರಾಜ್
ಕೊಹ್ಲಿ-ತಮನ್ನಾ-ಪ್ರಕಾಶ್ ರಾಜ್

ಚೆನ್ನೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟ-ನಟಿಯರಾದ ಪ್ರಕಾಶ್ ರಾಜ್, ರಾಣಾ ಮತ್ತು ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 

ಆನ್ ಲೈನ್ ಜೂಜಾಟದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹಿರಾತುಗಳಲ್ಲಿ ನಟಿಸಿರುವ ಕೊಹ್ಲಿ, ತಮನ್ನಾ, ಗಂಗೂಲಿ, ರಾಣಾ ಮತ್ತು ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದ್ದು ನವೆಂಬರ್ 19ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ತಮಿಳುನಾಡಿನಲ್ಲಿ ಜೂಜಾಟಕ್ಕೆ ಬಳಸಿದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದೆ ಬರೋಬ್ಬರಿ 9 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ವ್ಯಕ್ತಿ, ಆನ್‌ಲೈನ್‌ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆಪ್‌ಗಳನ್ನು ರದ್ದು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.

ಯುವಕರನ್ನು ಮನಸ್ಸನ್ನು ಆನ್‌ಲೈನ್‌ ಜೂಜಾಟಕ್ಕೆ ಸೆಳೆಯಲು ಕ್ರಿಕೆಟ್ ಖ್ಯಾತನಾಮರನ್ನು ಹಾಗೂ ಸಿನಿಮಾ ನಟ-ನಟಿಯರನ್ನು ಜಾಹೀರಾತುಗಳಲ್ಲಿ ಜೂಜು ಆನ್‌ಲೈನ್‌ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.

ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದ ಕಳೆದ ಮಾರ್ಚ್‌ನಿಂದ ಯಾವುದೇ ಕ್ರಿಕೆಟ್‌ ಚಟುವಟಿಕೆಗಳು ನಡೆದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com