ಉತ್ತರಪ್ರದೇಶದ ಮಥುರಾ ದೇವಸ್ಥಾನದಲ್ಲಿ ನಮಾಜ್: ನಾಲ್ವರ ವಿರುದ್ಧ ಎಫ್ಐಆರ್ ದಾಖಲು!

ಅನುಮತಿ ಇಲ್ಲದೆ ಮಥುರಾದ ನಂದ ಬಾಬಾ ದೇಗುಲದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಮಾಜ್ ದೃಶ್ಯ
ನಮಾಜ್ ದೃಶ್ಯ

ಮಥುರಾ(ಉತ್ತರಪ್ರದೇಶ): ಅನುಮತಿ ಇಲ್ಲದೆ ಮಥುರಾದ ನಂದ ಬಾಬಾ ದೇಗುಲದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಖುದಾಯಿ ಖಿದ್ ಮತ್ ಗರ್ ಸಂಘಟನೆಯ ಸಂಸ್ಥಾಪಕ ದೆಹಲಿ ಮೂಲದ ಫೈಜಲ್ ಖಾನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಉತ್ತರಪ್ರದೇಶಕ್ಕೆ ಕರೆತಂದಿದ್ದಾರೆ ಎಂದು ಮಥುರಾ ಎಸ್ಎಸ್ ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ. 

ಫೈಜಲ್ ಖಾನ್ ಹಾಗೂ ಚಾಂದ್ ಮೊಹಮ್ಮದ್ ಇಬ್ಬರು ಮಥುರಾ ದೇಗುಲದಲ್ಲಿ ನಮಾಜ್ ಮಾಡಿದ್ದರು. ಇದನ್ನು ಅಲೋಕ್ ರತನ್ ಹಾಗೂ ನೀಲೇಶ್ ಗುಪ್ತಾ ಎಂಬುವರು ಫೋಟೋ ಮತ್ತು ವಿಡಿಯೋ ಮಾಡಿದ್ದರು. 

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಥುರಾ ದೇಗುಲದ ಪೂಜಾರಿ ಕನ್ಹಾ ಗೋಸ್ವಾಮಿ ಅವರು ಪ್ರಕರಣ ಸಂಬಂಧ ದೂರು ನೀಡಿದ್ದರು. 

ಖುದಾಯಿ ಖಿದ್ ಮತ್ ಗರ್ ಸಂಘಟನೆಯು ಧಾರ್ಮಿಕ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಂಘಟನೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com