ಚಿನಿವಾರ ಪೇಟೆ: ಚಿನ್ನದ ಬೆಲೆಯಲ್ಲಿ ಹೆಚ್ಚಳ, ಬೆಳ್ಳಿ ಬೆಲೆಯಲ್ಲಿ ಕುಸಿತ

ಹೆಚ್ ಡಿಎಫ್ ಸಿ ಸೆಕ್ಯುರಿಟಿಸ್ ಪ್ರಕಾರ ತೀವ್ರವಾದ ರೂಪಾಯಿ ಮೌಲ್ಯ ಕುಸಿತದ ನಡುವೆ  ಚಿನ್ನದ ಬೆಲೆಯಲ್ಲಿ ಇಂದು  111 ರೂ ಏರಿಕೆ ಕಂಡಿದ್ದು, 10 ಗ್ರಾಮ್ ಚಿನ್ನದ ಬೆಲೆ  50 ಸಾವಿರದ 743 ರೂ ಆಗಿದೆ. ನಿನ್ನೆ 10 ಗ್ರಾಮ್ ಚಿನ್ನದ ಬೆಲೆ 50 ಸಾವಿರದ 632 ಆಗಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹೆಚ್ ಡಿಎಫ್ ಸಿ ಸೆಕ್ಯುರಿಟಿಸ್ ಪ್ರಕಾರ ತೀವ್ರವಾದ ರೂಪಾಯಿ ಮೌಲ್ಯ ಕುಸಿತದ ನಡುವೆ  ಚಿನ್ನದ ಬೆಲೆಯಲ್ಲಿ ಇಂದು  111 ರೂ ಏರಿಕೆ ಕಂಡಿದ್ದು, 10 ಗ್ರಾಮ್ ಚಿನ್ನದ ಬೆಲೆ  50 ಸಾವಿರದ 743 ರೂ ಆಗಿದೆ. ನಿನ್ನೆ 10 ಗ್ರಾಮ್ ಚಿನ್ನದ ಬೆಲೆ 50 ಸಾವಿರದ 632 ಆಗಿತ್ತು. 

ಆದಾಗ್ಯೂ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ನಿನ್ನೆಯ ವಹಿವಾಟಿನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 61 ಸಾವಿರದ 935 ಇತ್ತು. ಆದರೆ, ಇಂದು ಪ್ರತಿ ಕೆಜಿ ಬೆಳ್ಳಿ ಬೆಲೆ 60, ಸಾವಿರದ 669 ಆಗಿದೆ. ಬುಧವಾರ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 35 ಪೈಸೆ ಕುಸಿತದೊಂದಿಗೆ 74. 76ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. 

ಅಂತಾರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,895 ಡಾಲರ್‌ಗೆ ನಷ್ಟಿದ್ದರೆ  ಬೆಳ್ಳಿ ಕೂಡ ಪ್ರತಿ ಓನ್ಸ್ ಗೆ ಶೇ. 23.60  ಡಾಲರ್ ಗೆ ಇಳಿಕೆಯಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಮೇಲಿನ ಅನಿಶ್ಚಿತತೆಯ ಮೇಲೆ ಚಿನ್ನದ ಬೆಲೆಗಳು ಹೆಚ್ಚಿನ  ಡಾಲರ್‌ನಲ್ಲಿ ಮಾರಾಟವಾಗುತ್ತಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು ) ತಪನ್ ಪಟೇಲ್ ಹೇಳಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಅಂತಿಮ ಫಲಿತಾಂಶ ಊಹೆಯ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿರುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com