ಅಧಿಕಾರಕ್ಕಾಗಿ ನಿತೀಶ್ ಕುಮಾರ್ ಮತ್ತೆ ಲಾಲು ಮುಂದೆ ಮಂಡಿಯೂರಲಿದ್ದಾರೆ: ಚಿರಾಗ್ ಪಾಸ್ವಾನ್

ಜೆಡಿಯು-ಬಿಜೆಪಿ ಮೈತ್ರಿಕೂಟದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೊಂದು ಅವಧಿಯ ಅಧಿಕಾರಕ್ಕಾಗಿ ಮತ್ತೆ ಆರ್ ಜೆಡಿ ಮುಖ್ಯಸ್ಥರ ಮುಂದೆ ಮಂಡಿಯೂರಲಿದ್ದಾರೆ ಎಂದು ಹೇಳಿದ್ದಾರೆ.

Published: 05th November 2020 03:56 PM  |   Last Updated: 05th November 2020 03:56 PM   |  A+A-


LJP president Chirag Paswan (L) with Bihar CM Nitish Kumar

ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಸಿಎಂ ನಿತೀಶ್ ಕುಮಾರ್(ಸಂಗ್ರಹ ಚಿತ್ರ)

Posted By : Lingaraj Badiger
Source : PTI

ಪಾಟ್ನಾ: ಜೆಡಿಯು-ಬಿಜೆಪಿ ಮೈತ್ರಿಕೂಟದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೊಂದು ಅವಧಿಯ ಅಧಿಕಾರಕ್ಕಾಗಿ ಮತ್ತೆ ಆರ್ ಜೆಡಿ ಮುಖ್ಯಸ್ಥರ ಮುಂದೆ ಮಂಡಿಯೂರಲಿದ್ದಾರೆ ಎಂದು ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿರಾಗ್ ಪಾಸ್ವಾನ್ ಅರು, ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ನಿತೀಶ್ ಕುಮಾರ್ ಅವರು ಇದೇ ನವೆಂಬರ್ 10ರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ತೇಜಸ್ವಿ ಯಾದವ್ ಅವರ ಮುಂದೆ ಮಂಡಿಯೂರಲಿದ್ದಾರೆ ಎಂದರು,

ನಿತೀಶ್ ಕುಮಾರ್ ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಪ್ರಧಾನಿ ಮೋದಿ ಜನಪ್ರಿಯತೆಯನ್ನು ಬಳಸಿಕೊಳ್ಳುತ್ತಿರುವ ನಿತೀಶ್, ನವೆಂಬರ್ 10ರ ಬಳಿಕ ಮಹಾಘಟಬಂಧನ್ ಮೈತ್ರಿಕೂಟದ ನಾಯಕ ತೇಜಸ್ವಿ ಯಾದವ್ ಮುಂದೆ ಮಂಡಿಯೂರಿ ಕುಳಿತುಕೊಳ್ಳಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಪ್ರಧಾನಿ ಮೋದಿ ಅವರನ್ನು ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿದ್ದ ನಿತೀಶ್, ಈಗ ಅದೇ ಪ್ರಧಾನಿ ಮೋದಿ ಅವರೊಂದಿಗೆ ನಾಚಿಕೆಯಿಲ್ಲದೇ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಬಳಸಿಕೊಳ್ಳುವ ನಿತೀಶ್ ಅವರಿಗೆ ಬಿಹಾರದ ಮತದಾರ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಚಿರಾಗ್ ಗುಡುಗಿದರು.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp