ಈವರೆಗೂ ಕೇಳಿಯೇ ಇರದ ಇಂಗ್ಲಿಷ್ ಪದಗಳನ್ನು ಹೇಳಿದ 10 ನೇ ತರಗತಿ ಬಾಲಕಿ: ಶಶಿ ತರೂರ್ ನಿಬ್ಬೆರಗು!

ಶಶಿ ತರೂರ್ ಇಂಗ್ಲೀಷ್ ಮಾತನಾಡುತ್ತಿದ್ದಾರೆ ಎಂದರೆ ಪಕ್ಕದಲ್ಲಿ ಆಂಗ್ಲ ನಿಘಂಟು ಇಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕೆಂಬುದು ಜನಜನಿತ, ಆದರೆ ಅಂತಹ ಶಶಿ ತರೂರ್ ಅವರೂ ಇಂಗ್ಲಿಷ್ ನಿಘಂಟು ಪಕ್ಕದಲ್ಲಿಟ್ಟುಕೊಂಡು ಅರ್ಥ ಮಾಡಿಕೊಳ್ಳುವಂತಾದರೆ?

Published: 06th November 2020 04:44 PM  |   Last Updated: 06th November 2020 04:47 PM   |  A+A-


Shashi Tharoor

ಶಶಿ ತರೂರ್

Posted By : Srinivas Rao BV
Source : Online Desk

ತಿರುವನಂತಪುರಂ: ಶಶಿ ತರೂರ್ ಇಂಗ್ಲೀಷ್ ಮಾತನಾಡುತ್ತಿದ್ದಾರೆ ಎಂದರೆ ಪಕ್ಕದಲ್ಲಿ ಆಂಗ್ಲ ನಿಘಂಟು ಇಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕೆಂಬುದು ಜನಜನಿತ, ಆದರೆ ಅಂತಹ ಶಶಿ ತರೂರ್ ಅವರೂ ಇಂಗ್ಲಿಷ್ ನಿಘಂಟು ಪಕ್ಕದಲ್ಲಿಟ್ಟುಕೊಂಡು ಅರ್ಥ ಮಾಡಿಕೊಳ್ಳುವಂತಾದರೆ?

ಹೀಗೆ ಮಾಡಿದ್ದು ಯಾರು ಅಂತೀರಾ? ಕೇರಳದ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಶಿ ತರೂರ್ ಗೆ ಕೇಳರಿಯದ ಇಂಗ್ಲಿಷ್ ಶಬ್ದಗಳನ್ನು ಪರಿಚಯಿಸಿದ್ದಾಳೆ.

ಇಡುಕ್ಕಿಯ 10 ನೇ ತರಗತಿಯ ದಿಯಾ ಶಶಿ ತರೂರ್ ಗೆ ಅಪರೂಪದ ಇಂಗ್ಲೀಷ್ ಪದಗಳನ್ನು ಪರಿಚಯಿಸಿದ್ದಾರೆ. ಇದನ್ನು ಕಂಡ ಶಶಿ ತರೂರ್ ನಿಬ್ಬೆರಗಾಗಿದ್ದಾರೆ.

ಕ್ಲಬ್ ಎಫ್ಎಂ ಶೋ ನಲ್ಲಿ ಆರ್ ಜೆ ರಫಿ ಅವರ ಕಾರ್ಯಕ್ರಮದಲ್ಲಿ ದಿಯಾ ಮಾತನಾಡುತ್ತಿದ್ದರು. ಈ ವೇಳೆ  ಶಶಿ ತರೂರ್ ಅಚ್ಚರಿಯ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಶಶಿ ತರೂರ್ ಗೆ ಮೆಸೇಜ್ ಮಾಡಿದ್ದ ದಿಯಾ, ಸೂಪರ್ ಲಾಂಗ್ ಶಬ್ದವನ್ನು ಉಚ್ಚರಿಸುವಂತೆ ಹೇಳಿದ್ದರು.

ತಮಗೆ ಹೊಸ ಇಂಗ್ಲೀಷ್ ಶಬ್ದಗಳನ್ನು ಪರಿಚಯಿಸಿದ ದಿಯಾ ಬಗ್ಗೆ ಟ್ವೀಟರ್ ನಲ್ಲಿ ಶಶಿ ತರೂರ್ ಹಂಚಿಕೊಂಡಿದ್ದು, ನಾನು ಈ ಹಿಂದೆಂದೂ ಕೇಳರಿಯದ ಶಬ್ದಗಳನ್ನು 10 ನೇ ತರಗತಿಯ ದಿನಾ ಪರಿಚಯಿಸಿದ್ದಾರೆ. ಅವರಿಗೆ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp