ಬಿಪಿಒ, ಐಟಿಇಎಸ್ ಕಂಪೆನಿಗಳಿಗೆ ಸರ್ಕಾರದ ಸರಳ ಮಾರ್ಗಸೂಚಿ: ವರ್ಕ್ ಫ್ರಮ್ ಹೋಂ, ವರ್ಕ್ ಫ್ರಮ್ ಎನಿವೇರ್ ವಿಸ್ತರಣೆ

ಬಿಪಿಒಗಳು ಮತ್ತು ಐಟಿಇಎಸ್ ಕಂಪೆನಿಗಳ ಮೇಲಿನ ತೀವ್ರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಸರಳ ಮಾರ್ಗಸೂಚಿಗಳನ್ನು ಘೋಷಿಸಿದ್ದು ಮನೆಯಿಂದಲೇ ಕೆಲಸ (work from home) ಮತ್ತು ಎಲ್ಲಿಂದ ಬೇಕಾದರೂ ಕೆಲಸ (work from anywhere) ಮಾಡುವ ಅವಕಾಶವನ್ನು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬಿಪಿಒಗಳು ಮತ್ತು ಐಟಿಇಎಸ್ ಕಂಪೆನಿಗಳ ಮೇಲಿನ ತೀವ್ರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಸರಳ ಮಾರ್ಗಸೂಚಿಗಳನ್ನು ಘೋಷಿಸಿದ್ದು ಮನೆಯಿಂದಲೇ ಕೆಲಸ (work from home) ಮತ್ತು ಎಲ್ಲಿಂದ ಬೇಕಾದರೂ ಕೆಲಸ (work from anywhere) ಮಾಡುವ ಅವಕಾಶವನ್ನು ನೀಡಿದೆ.

ಇಂತಹ ಬಿಪಿಒ, ಐಟಿ ಕಂಪೆನಿಗಳಲ್ಲಿ ಆಗಾಗ್ಗೆ ನೌಕರರು ಬಂದು ಹಾಜರಾತಿ ಹಾಕಬೇಕು ಎಂಬ ನಿಯಮವನ್ನು ಈ ಸರಳ ಮಾರ್ಗಸೂಚಿ ತೆಗೆದುಹಾಕಲಿದ್ದು ಇತರ ಸೇವಾ ಪೂರೈಕೆದಾರರಿಗೆ(ಒಎಸ್ ಪಿ) ಇದರಿಂದ ಅನುಕೂಲವಾಗಲಿದೆ. 

ಕೋವಿಡ್-19 ಬಳಿಕ ಕಚೇರಿಗೆ ಬಂದು ಕೆಲಸ ಮಾಡುವ ಬದಲು ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಬೇಕೆಂದು ಐಟಿ-ಬಿಟಿ, ಬಿಪಿಒ ವಲಯಗಳು ಕೇಳುತ್ತಿದ್ದ ಸಂದರ್ಭದಲ್ಲಿ ಈ ನಡೆ ಮಹತ್ವ ಪಡೆದಿದೆ.

ಇತರ ಸೇವಾ ಪೂರೈಕೆದಾರರ ಅಡಿಯಲ್ಲಿ ಅಪ್ಲಿಕೇಶನ್ ಸರ್ವಿಸಸ್, ಐಟಿ ಆಧಾರಿತ ಸೇವೆಗಳು, ಟೆಲಿಕಾಂ ಸಂಪನ್ಮೂಲಗಳನ್ನು ಬಳಸಿ ನೀಡುವ ಹೊರಗುತ್ತಿಗೆ ಸೇವೆಗಳು ಬರುತ್ತವೆ. ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿ ಬ್ಯುಸ್ ನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್ (ಬಿಪಿಒಗಳು), ನಾಲೆಡ್ಜ್ ಪ್ರೊಸೆಸ್ ಔಟ್ ಸೋರ್ಸಿಂಗ್(ಕೆಪಿಒಗಳು), ಐಟಿ ಆಧಾರಿತ ಸೇವೆಗಳು (ಐಟಿಇಎಸ್), ಕಾಲ್ ಸೆಂಟರ್ ಗಳಿಗೆ ಬರುತ್ತವೆ.

ಮನೆಯಿಂದಲೇ ಕೆಲಸ ಮಾಡುವ ಪರಿಕಲ್ಪನೆಯನ್ನು ಉತ್ತೇಜಿಸುವುದು ಮತ್ತು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಭಾರತದಲ್ಲಿ ಎಲ್ಲಿಂದ ಬೇಕಾದರೂ ಕುಳಿತು ಕೆಲಸ ಮಾಡುವ ವ್ಯವಸ್ಥೆಗೆ ಒದಗಿಸಲಾಗುವುದು ಎಂದು ವಿಸ್ತೃತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com