ಸರ್ಕಾರ 'ಇತರರಿಗೆ' ತಲಾಬಾಗುವ ನಡೆ ಗಂಭೀರ ಸಮಸ್ಯೆ ತಂದಿಡಬಹುದು: ರಾಹುಲ್‌ ಗಾಂಧಿ

ಇತರರ ಮುಂದೆ ತಲೆಬಾಗುವ ಕೇಂದ್ರ ಸರ್ಕಾರದ ನಡೆ ದೇಶಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಮಾಜಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಇತರರ ಮುಂದೆ ತಲೆಬಾಗುವ ಕೇಂದ್ರ ಸರ್ಕಾರದ ನಡೆ ದೇಶಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಮಾಜಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌, ಚೀನಿಯರು ಶಕ್ತಿ ಮತ್ತು ಸ್ಪಷ್ಟ ಯೋಜನೆಯ ಕ್ರಿಯೆಯನ್ನು ಇಷ್ಟಪಡುತ್ತಾರೆ. ಆದರೆ, ಭಾರತ ಸರ್ಕಾರದ ಎಲ್ಲರಿಗೂ ತಲೆಬಾಗುವ ವರ್ತನೆ ಅಪಾಯಕಾರಿಯಾಗಬಲ್ಲದು ಎಂದಿದ್ದಾರೆ.

ಚೀನಾದೊಂದಿಗಿನ ಕಲಹ ಬಹುದೊಡ್ಡ ಸ್ವರೂಪ ಪಡೆದುಕೊಳ್ಳಬಹುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿಕೆಯ ವರದಿಯನ್ನು ಕೂಡ ಲಗತ್ತಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು, ದೇಶದಲ್ಲಿ ರಕ್ಷಣಾ ಅಧಿಕಾರಿಗಳ ಕೊರತೆ ಇದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದರು.

ಇಂದು ಬೆಳಗ್ಗೆ ಬಿಪಿನ್ ರಾವತ್ ಅವರು, ಪೂರ್ವ ಲಡಾಖ್ ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಉದ್ದಕ್ಕೂ ಭಾರತ - ಚೀನಾ ಸೇನೆ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಹೇಳಿದ್ದರು. ಅಲ್ಲದೆ ಚೀನಾದೊಂದಿಗಿನ ಸಂಘರ್ಘ ದೊಡ್ಡ ಸ್ವರೂಪ ಪಡೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com