ಭಯಾನಕ ವಿಡಿಯೋ: ಮಾಸ್ಕ್ ಧರಿಸದೆ ದಂಡ ತಪ್ಪಿಸಲು ಪೊಲೀಸ್ ನನ್ನು ಕಾರ್ ಬಾನೆಟ್‌ ಮೇಲೆ ಎಳೆದೊಯ್ದ ಚಾಲಕ

ಮಾಸ್ಕ್ ಧರಿಸದ ವ್ಯಕ್ತಿಯೊಬ್ಬರು ದಂಡದಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ಕಿಲೋ ಮೀಟರ್ ಗಟ್ಟಲೆ ಎಳೆದೊಯ್ದಿರುವ ಘಟನೆ ಪುಣೆಯ ಚಿಂಚವಾಡ್ ಬ್ಯುಸಿ ರಸ್ತೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಮಾಸ್ಕ್ ಧರಿಸದ ವ್ಯಕ್ತಿಯೊಬ್ಬರು ದಂಡದಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನ ಬಾನೆಟ್ ಮೇಲೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ಕಿಲೋ ಮೀಟರ್ ಗಟ್ಟಲೆ ಎಳೆದೊಯ್ದಿರುವ ಘಟನೆ ಪುಣೆಯ ಚಿಂಚವಾಡ್ ಬ್ಯುಸಿ ರಸ್ತೆಯಲ್ಲಿ ನಡೆದಿದೆ.

ಕಾರು ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಸಂಚಾರಿ ಪೊಲೀಸ್ ನನ್ನು ಸುಮಾರು 1 ಕಿಲೋ ಮೀಟರ್ ಗಳ ವರೆಗೂ ಕಾರಿನ ಬಾನೆಟ್ ಮೇಲೆಯೇ ಎಳೆದೊಯ್ದುಲಾಗಿದೆ. ನಂತರ ಪೊಲೀಸ್ ಕಾರಿನಿಂದ ಕೆಳಗಡೆ ಬಿದಿದ್ದು, ಅವರಿಗೆ ಕಾಲಿಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಪೊಲೀಸ್ ಪೇದೆಯನ್ನು ಅಬಸಾಹೇಬ್ ಸಾವಂತ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ಯುವರಾಜ್ ಹನುವಟೆ(49)ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಎಎನ್ ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಕಾರಿನ ಸುತ್ತ ಹಲವು ವಾಹನಗಳು ಇದ್ದರೂ ಕಾರನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com