ಚುನಾವಣೋತ್ತರ ಸಮೀಕ್ಷೆ: ಬಿಹಾರದಲ್ಲಿ ಮತ್ತೆ ಅತಂತ್ರ ವಿಧಾನಸಭೆ, ಮಹಾಘಟಬಂಧನ್ ಗೆ ಹೆಚ್ಚು ಸ್ಥಾನ

ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನಕ್ಕೆ ಶನಿವಾರ ಸಂಜೆ ತೆರೆ ಬಿದ್ದಿದ್ದು, ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ.
ತೇಜಶ್ವಿ ಯಾದವ್ - ಚಿರಾಗ್ ಪಾಸ್ವಾನ್ - ನಿತೀಶ್ ಕುಮಾರ್
ತೇಜಶ್ವಿ ಯಾದವ್ - ಚಿರಾಗ್ ಪಾಸ್ವಾನ್ - ನಿತೀಶ್ ಕುಮಾರ್

ಪಾಟ್ನಾ: ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನಕ್ಕೆ ಶನಿವಾರ ಸಂಜೆ ತೆರೆ ಬಿದ್ದಿದ್ದು, ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ.

ಹಲವು ಸಮೀಕ್ಷೆಗಳ ಪ್ರಕಾರ, ಬಿಹಾರ ಮತದಾರ ಈ ಬಾರಿಯೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೇ ಇರುವುದರಿಂದ ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ. ಆದರೆ ತೇಜಶ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಟುಡೇಯ್ಸ್ ಚಾಣಕ್ಯ ಸಮೀಕ್ಷೆ
ಆರ್‌ಜೆಡಿ ನೇತೃತ್ವದಲ್ಲಿ ಮಹಾಘಟಬಂಧನ : 108 -131
ಜೆಡಿಯು ನೇತೃತ್ವದ ಎನ್‌ಡಿಎ : 104 - 128
ಇತರರು: 4-8

ಇಂಡಿಯಾ ಟಿವಿ-ಸಿ ವೋಟರ್ ಸಮೀಕ್ಷೆ
ಜೆಡಿಯು-ಬಿಜೆಪಿ ಮೈತ್ರಿಕೂಟ - 116
ಮಹಾಘಟಬಂಧನ್ - 120
ಎಲ್ ಜೆಪಿ - 1
ಇತರೆ - 6

ಜನ್ ಕಿ ಬಾತ್ (ರಿಪಬ್ಲಿಕ್)
ಬಿಜೆಪಿ : 60-75
ಜೆಡಿ(ಯು) : 31-42
ಆರ್ಜೆಡಿ : 91-79
ಎಲ್ಜೆಪಿ : 8-5

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com