ಇಸ್ರೋದ ಪಿಎಸ್ಎಲ್ ವಿ ಸಿ49 ಉಡಾವಣೆ ಯಶಸ್ವಿ; ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಸೇರಿದಂತೆ 10 ಉಪಗ್ರಹಗಳು ಕಕ್ಷೆಗೆ!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಯಶಸ್ವಿ ಉಡಾವಣೆ ಕೈಗೊಂಡಿದ್ದು, ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಸೇರಿದಂತೆ 10 ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ಎಲ್ ವಿ ಸಿ49 ಯಶಸ್ವಿ ಉಡಾವಣೆಯಾಗಿದೆ.
Published: 07th November 2020 04:13 PM | Last Updated: 07th November 2020 04:15 PM | A+A A-

ಪಿಎಸ್ಎಲ್ ವಿ ಸಿ49 ಉಡಾವಣೆ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಯಶಸ್ವಿ ಉಡಾವಣೆ ಕೈಗೊಂಡಿದ್ದು, ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಸೇರಿದಂತೆ 10 ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ಎಲ್ ವಿ ಸಿ49 ಯಶಸ್ವಿ ಉಡಾವಣೆಯಾಗಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಮಧ್ಯಾಹ್ನ ಪಿಎಸ್ಎಲ್ ವಿ ಸಿ49 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ ಡಿಎಸ್ ಸಿ) ಎಸ್ ಆರ್ ಎಚ್ ಆರ್ ನಿಂದ 9 ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹಕವು ತನ್ನ 51ನೇ ಮಿಷನ್ (ಪಿಎಸ್ ಎಲ್ ವಿ-ಸಿ49) ಇಓಎಸ್-01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಉಡಾವಣೆ ಮಾಡಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ 2020ರ ನವೆಂಬರ್ 7ರಂದು ಉಡಾವಣೆಯನ್ನ ತಾತ್ಕಾಲಿಕವಾಗಿ 1502 Hrs IST ನಲ್ಲಿ ನಿಗದಿಮಾಡಲಾಗಿದೆ' ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಭಾರತದ ಪಿಎಸ್ ಎಲ್ ವಿ-ಸಿ49 ಹಯು EOS-01 ಅನ್ನ ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಉಡಾವಣೆ ಮಾಡಿದೆ.
ಕೊರೋನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿತ್ತು. ಇದೀಗ ಭೂ ವೀಕ್ಷಣಾ ಉಪಗ್ರಹ ಇಒಎಸ್-01ನ ಉಡಾವಣೆ ಮೂಲಕ ಮತ್ತೆ ಇಸ್ರೋ ಅಂತರಿಕ್ಷ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.
#PSLVC49 lifts off successfully from Satish Dhawan Space Centre, Sriharikota#ISRO #EOS01 pic.twitter.com/dWCBbKty8F
— ISRO (@isro) November 7, 2020
#EOS01 successfully separated from fourth stage of #PSLVC49 and injected into orbit#ISRO pic.twitter.com/2u5jBPGNQD
— ISRO (@isro) November 7, 2020