ಜೈಲಿನಲ್ಲಿ ಮೊಬೈಲ್ ಪೋನ್ ಬಳಸಿ ಸಿಲುಕಿಬಿದ್ದ ಅರ್ನಾಬ್ ಗೋಸ್ವಾಮಿ!

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ  ಆರೋಪದ ಮೇಲೆ ಬಂಧಿತರಾಗಿರುವ ಪ್ರಮುಖ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಪತ್ರಕರ್ತ ಅರ್ನಬ್ ಗೋಸ್ವಾಮಿ
ಪತ್ರಕರ್ತ ಅರ್ನಬ್ ಗೋಸ್ವಾಮಿ

ಮುಂಬೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ  ಆರೋಪದ ಮೇಲೆ ಬಂಧಿತರಾಗಿರುವ ಪ್ರಮುಖ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತೊಮ್ಮೆ  ಸುದ್ದಿಯಲ್ಲಿದ್ದಾರೆ.

ಪೊಲೀಸರ ವಶದಲ್ಲಿದ್ದ ಸಮಯದಲ್ಲಿ.. ನಿಯಮಗಳಿಗೆ ವಿರುದ್ಧವಾಗಿ ಮೊಬೈಲ್ ಫೋನ್ ಬಳಸಿ ಅವರು ಸಿಲುಕಿ ಬಿದ್ದಿದ್ದಾರೆ. ಇದರಿಂದ ಅಧಿಕಾರಿಗಳು ಅವರನ್ನು ಮತ್ತೊಂದು ಜೈಲಿಗೆ ಸ್ಥಳಾಂತರಿಸಿದ್ದಾರೆ. 2018 ರಲ್ಲಿ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕನ್ ಟಿವಿ ಸಂಪಾದಕ ಅರ್ನಾಬ್ ಅವರನ್ನು ನವೆಂಬರ್ 4 ರಂದು ಪೊಲೀಸರು ಬಂಧಿಸಿದ್ದರು. ನಂತರ ಅವರ ಬಳಿಯಿದ್ದ ಮೊಬೈಲ್ ಫೋನ್ ಪೊಲೀಸರು ವಶಪಡಿಸಿಕೊಂಡಿದ್ದರು.

ಆದರೂ, ಅರ್ನಾಬ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವುದು ರಾಯಗಡ್ ಪೊಲೀಸರು ಗಮನಿಸಿದ್ದು, ಅರ್ನಾಬ್ ಜೈಲಿನ ಕೋಣೆಯಲ್ಲಿದ್ದಾಗಲೇ  ಬೇರೊಬ್ಬರ ಮೊಬೈಲ್ ಫೋನ್ ಮೂಲಕ ಸೋಷಿಯಲ್  ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದರು ಎಂದು  ಪೊಲೀಸರು ಹೇಳಿದ್ದಾರೆ. ಕಾನೂನು ಹಾಗೂ ನಿಯಮಾವಳಿ ವಿರುದ್ಧವಾಗಿ ಅರ್ನಾಬ್ ಮೊಬೈಲ್ ಫೋನ್ ಬಳಸಿದ್ದಾರೆ. ಹಾಗಾಗಿ ಅವರನ್ನು ಅಲಿಬಾಗ್   ಜೈಲಿನಿಂದ ತಲೋಜ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಂಶದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಶನಿವಾರ ಸಂಜೆ ತಲೋಜಾ ಜೈಲಿಗೆ ಸ್ಥಳಾಂತರಿಸುತ್ತಿದ್ದ  ಸಂದರ್ಭದಲ್ಲಿ ಅಲಿಬಾಗ್ ಜೈಲು ಅಧಿಕಾರಿ ತಮಗೆ   ದೈಹಿಕ ಹಿಂಸೆ ನೀಡಿದ್ದಾರೆ, ತಮ್ಮ ಪ್ರಾಣಕ್ಕೆ ಅಪಾಯವಿದೆ.... ಎಂದು ಅರ್ನಾಬ್ ಪೊಲೀಸ್ ವ್ಯಾನ್ ನಿಂದ ಕಿರುಚಿ ಹೇಳಿದ್ದಾರೆ. ಮತ್ತೊಂದು ಕಡೆ ಅವರ ಪತ್ನಿ,  ರಿಪಬ್ಲಿಕ್ ಟಿವಿ ಹಿರಿಯ ಕಾರ್ಯಕಾರಿ ಸಂಪಾದಕಿ ಸಂಯಬ್ರತಾ ರಾಯ್... ಅರ್ನಾಬ್ ವಿರುದ್ದ ಮಾಡಲಾಗಿರುವ ಆರೋಪಗಳನ್ನು ಖಂಡಿಸಿದ್ದಾರೆ.  ತಮ್ಮ ಪತಿ ವಿರುದ್ದ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಅವರನ್ನು   ಜೀಪಿಗೆ ತಳ್ಳಿಕೊಂಡು ಹತ್ತಿಸಿದ್ದಾರೆ. ತಮ್ಮ ಜೀವಕ್ಕೆ ಅಪಾಯ ಇದೆ ಅವರೂ ಮನವಿ ಮಾಡಿ ಕೊಂಡರೂ  ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ, ವಕೀಲರ ಭೇಟಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಅವರು  ಅವರು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com