ಟ್ರಂಪ್ ಸೋಲಿನಿಂದ ಭಾರತ ಪಾಠ ಕಲಿಯಬೇಕು: ಶಿವಸೇನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತವೂ ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ ಹೇಳಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಶಿವಸೇನೆ ಈ ಮೇಲಿನ ಹೇಳಿಕೆ ನೀಡಿದೆ.

Published: 09th November 2020 01:10 PM  |   Last Updated: 09th November 2020 01:27 PM   |  A+A-


Posted By : Raghavendra Adiga
Source : ANI

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತವೂ ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ ಹೇಳಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಶಿವಸೇನೆ ಈ ಮೇಲಿನ ಹೇಳಿಕೆ ನೀಡಿದೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ, "ಅಧ್ಯಕ್ಷ ಟ್ರಂಪ್ ಎಂದಿಗೂ ರಾಷ್ಟ್ರದ ಅಧ್ಯಕ್ಷ ಪಟ್ಟಕ್ಕೆ ಅರ್ಹರಲ್ಲ. ಅಮೆರಿಕದ ನಾಗರಿಕರು ತಾವು ನಾಲ್ಕು ವರ್ಷದ ಹಿಂದೆ ಮಾಡಿದ್ದ ತಪ್ಪನ್ನು ಸರಿಪಡಿಸಿದ್ದಾರೆ. ಟ್ರಂಪ್ ಗೆ ಒಂದೂ ಭರವಸೆ ಪೂರೈಸಲಾಗಿಲ್ಲ. ನಾವೂ ಸಹ ಟ್ರಂಪ್ ಸೋಲಿನಿಂದ ಕಲಿತರೆ ಒಳ್ಳೆಯದಾಗಲಿದೆ" ಎಂದಿದೆ.

ಅಮೆರಿಕಾದಲ್ಲಿ ನಿರುದ್ಯೋಗ ಸಾಂಕ್ರಾಮಿಕ ಕೋವಿಡ್ ಗಿಂತ ಹೆಚ್ಚಾಗಿದೆ. ಹಾಗಿದ್ದರೂ ಟ್ರಂಪ್ ಸಮಸ್ಯೆ ಬಗೆಹರಿಸುವುದರ ಬದಲಾಗಿ ಅಸಂಬದ್ಧ ಹೇಳಿಕೆ, ರಾಜಕೀಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ಪಕ್ಷ ಹೇಳಿದೆ. "ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಬಿಹಾರದಲ್ಲಿ ಅಧಿಕಾರವು ಬದಲಾವಣೆ ಹಾದಿಯಲ್ಲಿದೆ.. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಸ್ಪಷ್ಟವಾಗಿ ಸೋಲನುಭವಿಸಿದೆ.. ದೇಶ ಮತ್ತು ರಾಜ್ಯದಲ್ಲಿ ನಮ್ಮನ್ನು ಹೊರತುಪಡಿಸಿ ಬೇರೆ ಪರ್ಯಾಯಗಳಿಲ್ಲ ಎಂಬ ಭ್ರಮೆಯಿಂದ ಕೂಡಿರ್ಯ್ವ ನಾಯಕರನ್ನು ಮನೆಗೆ ಕಳಿಸುವ ಕೆಲಸವನ್ನು ಜನರು ಮಾಡಬೇಕಾಗಿದೆ" ಎಂದು ಹೇಳಿದೆ.

ಇನ್ನು ಟ್ರಂಪ್ ತಮ್ಮ ಸೋಲು ಒಪ್ಪಿಕೊಳ್ಳಲು ತಯಾರಿಲ್ಲ. ಅವರು ಮತದಾನದ ಹಗರಣದ ಬಗ್ಗೆ "ಹಾಸ್ಯಾಸ್ಪದ" ಆರೋಪಗಳನ್ನು ಮಾಡಿದ್ದಾರೆ. "ನಮ್ಮ ದೇಶದಲ್ಲಿ ಟ್ರಂಪ್ ಅವರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಲಾಯಿತು ಎಂಬುದನ್ನು ಮರೆಯಬಾರದು. ತಪ್ಪಾದ ವ್ಯಕ್ತಿಯೊಂದಿಗೆ ನಿಲ್ಲುವುದು ನಮ್ಮ ಸಂಸ್ಕೃತಿಯಲ್ಲ ಆದರೆ ಅದನ್ನು ಇನ್ನೂ ಮುಂದುವರಿಸಲಾಗುತ್ತಿದೆ. ಬೈಡನ್ ಅಮೆರಿಕದ ಮುಖ್ಯಸ್ಥರಾಗುವುದು ಖಚಿತ" ಶಿವಸೇನೆ ಅಭಿಪ್ರಾಯಪಟ್ಟಿದೆ.

"ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಟ್ರಂಪ್ ಮಹಿಳೆಯನ್ನು ಗೌರವಿಸಲಿಲ್ಲ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಂತಹ ವ್ಯಕ್ತಿಯನ್ನು ಬೆಂಬಲಿಸುವವರು ಇದರಿಂದ ಕಲಿಯಬೇಕು" ಎಂದು ಹೇಳಿದೆ.

ಭಾರತವು 'ನಮಸ್ತೆ ಟ್ರಂಪ್' ಕಾರ್ಯಕ್ರಮ ನಡೆಸಿದ್ದರೂ ಅಮೆರಿಕದ ಸಂವೇದನಾಶೀಲ ಜನರು ಟ್ರಂಪ್‌ಗೆ 'ಬೈ-ಬೈ' ಹೇಳುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿದ್ದಾರೆ ಎಂದು ಶಿವಸೇನೆ ಹೇಳಿದೆ. "ಅದೇ ರೀತಿ, ಪ್ರಧಾನಿ ಮೋದಿ, ನಿತೀಶ್ ಕುಮಾರ್ ಸೇರಿದಂತೆ ನಾಯಕರು ಯುವ ತೇಜಶ್ವಿ ಯಾದವ್ ಅವರ ಮುಂದೆ ನಿಲ್ಲಲು ಸಾಧ್ಯವಿಲ್ಲ" ಎಂದು ಅದು ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp