ಕಾಶ್ಮೀರ ಎನ್ ಕೌಂಟರ್: ಆಂಧ್ರ ಪ್ರದೇಶದ ಓರ್ವ ಯೋಧ ಸೇರಿ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಭಾನುವಾರ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಚಿತ್ತೂರು ಜಿಲ್ಲೆಯ ಇರಾಲಾ ಮಂಡಲದ ರೆಡ್ಡಿವರಿಪಲ್ಲೆಯ ಯೋಧ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಪ್ರವೀಣ್
ಪ್ರವೀಣ್

ತಿರುಪತಿ: ಜಮ್ಮು ಮತ್ತು ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಭಾನುವಾರ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಚಿತ್ತೂರು ಜಿಲ್ಲೆಯ ಇರಾಲಾ ಮಂಡಲದ ರೆಡ್ಡಿವರಿಪಲ್ಲೆಯ ಯೋಧ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ನಿನ್ನೆ ನಡೆದ ಭೀಕರ ಎನ್‌ಕೌಂಟರ್‌ ನಲ್ಲಿ ಮೂವರು ಯೋಧರು ಹಾಗೂ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಈ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸಹ ಹೊಡೆದುರುಳಿಸಲಾಗಿದೆ.

ಹುತಾತ್ಮರಾದ ಆಂಧ್ರ ಪ್ರದೇಶ ಯೋಧ ಪ್ರವೀಣ್(37) ಪ್ರತಾಪ್ ರೆಡ್ಡಿ ಮತ್ತು ಸುಗುನಮ್ಮ ಅವರ ಏಕೈಕ ಪುತ್ರರಾಗಿದ್ದು, ಇತರರಿಂದ ಪ್ರೇರಿತರಾಗಿ 18 ವರ್ಷಗಳ ಹಿಂದೆ ಮದ್ರಾಸ್ ರೆಜಿಮೆಂಟ್ -18 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಪ್ರವೀಣ್ ಅವರು ಪತ್ನಿ, ಎಂಟು ವರ್ಷದ ಮಗಳು ಮತ್ತು ಐದು ವರ್ಷದ ಮಗನನ್ನು ಅಗಲಿದ್ದಾರೆ.

ಉತ್ತರ ಕಾಶ್ಮೀರ ಜಿಲ್ಲೆಯಾದ ಕುಪ್ವಾರದ ಮಚಿಲ್ ಸೆಕ್ಟರ್ ನಲ್ಲಿ ಭಾನುವಾರ ಪಾಕ್ ಆಕ್ರಮಿತ ಕಾಶ್ಮೀರ ಕಡೆಯಿಂದ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ವೇಳೆ ನಡೆದ ಗುಂಡಿನಚಕಮಕಿಯಲ್ಲಿ ಪ್ರವೀಣ್ ಹುತಾತ್ಮರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com