ಉಗ್ರರಿಂದ ಎಕೆ-47ಗಿಂತ ಹೆಚ್ಚು ಪಿಸ್ತೂಲ್ ವಶಪಡಿಸಿಕೊಂಡ ಭದ್ರತಾ ಪಡೆಗಳು: ಶಸಾಸ್ತ್ರ ಕೊರತೆಯ ಸೂಚನೆ!

 ಈ ವರ್ಷ ಜಮ್ಮು-ಕಾಶ್ಮೀರದಲ್ಲಿ ನಿಯೋಜನೆಗೊಂಡ ಭದ್ರತಾ ಪಡೆಗಳು ಉಗ್ರರಿಂದ ಎಕೆ-47 ಗಿಂತಲೂ ಹೆಚ್ಚಾಗಿ ಪಿಸ್ತೂಲ್ ನ್ನು ವಶಪಡಿಸಿಕೊಂಡಿವೆ. 
ಭಾರತೀಯ ಸೈನಿಕರು
ಭಾರತೀಯ ಸೈನಿಕರು

ನವದೆಹಲಿ: ಈ ವರ್ಷ ಜಮ್ಮು-ಕಾಶ್ಮೀರದಲ್ಲಿ ನಿಯೋಜನೆಗೊಂಡ ಭದ್ರತಾ ಪಡೆಗಳು ಉಗ್ರರಿಂದ ಎಕೆ-47 ಗಿಂತಲೂ ಹೆಚ್ಚಾಗಿ ಪಿಸ್ತೂಲ್ ನ್ನು ವಶಪಡಿಸಿಕೊಂಡಿವೆ. 

ಉಗ್ರ ಸಂಘಟನೆಗಳು ಶಸಾಸ್ತ್ರಗಳ ಕೊರತೆ ಅನುಭವಿಸುತ್ತಿವೆ. ಹಾಗಾಗೀ ಆಕ್ರಮಣಕಾರಿ ರೈಫಲ್ಸ್ ಬದಲಿಗೆ ಪಿಸ್ತೂಲ್ ಗಳನ್ನು ಬಳಸುತ್ತಿದ್ದಾರೆ ಎಂದು ಉಗ್ರ ನಿಗ್ರಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಅಕ್ಟೋಬರ್ 15ರವರೆಗೂ ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ 203 ಪಿಸ್ತೂಲ್ ಗಳು ಮತ್ತು 152 ಎಕೆ-47 ರೈಫಲ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಭದ್ರತಾ ಪಡೆಗಳಿಂದ ಪಡೆಯಲಾದ ಅಧಿಕೃತ ಮಾಹಿತಿಯನ್ನು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಒಟ್ಟಾರೇ 190 ಹಿಂಸಾತ್ಮಕ ಘಟನೆಗಳಲ್ಲಿ ಗಡಿಯಲ್ಲಿ ಗುಂಡಿನ ದಾಳಿಯ ಕಾರಣ 100 ಘಟನೆಗಳು ದಾಖಲಾಗಿವೆ. ಉಗ್ರರು 44 ಗ್ರೇನೆಡ್ ದಾಳಿ, 1 ಐಇಡಿ ಸ್ಫೋಟ ನಡೆಸಿರುವುದಾಗಿ ಮಾಹಿತಿ ತಿಳಿದುಬಂದಿದೆ. ಎಲ್ಲಾ ಎನ್ ಕೌಂಟರ್ ಗಳಲ್ಲಿ ವಶಪಡಿಸಿಕೊಂಡಿ ಪಿಸ್ತೂಲ್ ಗಳು ಒಂದೇ ರೀತಿಯಲ್ಲಿ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಉಗ್ರ ಸಂಘಟನೆಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಎಕೆ-47 ಹೊಂದಿರುತ್ತಾರೆ. ಆದರೆ, ಯುವ ಮತ್ತು ಹೊಸದಾಗಿ ನೇಮಕವಾದ ಉಗ್ರರಿಗೆ ಪಿಸ್ತೂಲ್ ಗಳನ್ನು ನೀಡಲಾಗುತ್ತಿದೆ. ಆಕ್ರಮಣಕಾರಿ ರೈಫಲ್ಸ್ ಗಳ ಕೊರತೆಯಾದಾಗ ಆಗಾಗ್ಗೆ ಪಿಸ್ತೂಲ್ ಗಳನ್ನು ಬಳಸುವುದನ್ನು ನೋಡುತ್ತಿರುವುದಾಗಿ ಸಿಆರ್ ಪಿಎಫ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್ ಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com