ಬಿಹಾರ ಮುಖ್ಯಮಂತ್ರಿಯಾಗಲು ಬಿಜೆಪಿ ಅವಕಾಶ ನೀಡಿದರೆ ನಿತೀಶ್ ಶಿವಸೇನಾಗೆ ಧನ್ಯವಾದ ಸಲ್ಲಿಸಬೇಕು- ರಾವತ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಿ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾದರೆ, ಶಿವಸೇನಾಗೆ ಧನ್ಯವಾದ ಸಲ್ಲಿಸಬೇಕು ಎಂದು ಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
Published: 10th November 2020 07:57 PM | Last Updated: 10th November 2020 07:57 PM | A+A A-

ನಿತೀಶ್ ಕುಮಾರ್
ಮುಂಬೈ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸಿ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾದರೆ, ಶಿವಸೇನಾಗೆ ಧನ್ಯವಾದ ಸಲ್ಲಿಸಬೇಕು ಎಂದು ಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಡೆದ ನಾಟಕೀಯ ಬೆಳವಣಿಗೆಯನ್ನು ಉಲ್ಲೇಖಿಸಿರುವ ರಾವತ್, ಮೈತ್ರಿ ಪಕ್ಷಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದನ್ನು ಶಿವಸೇನಾ ತೋರಿಸಿದೆ ಎಂದಿದ್ದಾರೆ.
ನಿತೀಶ್ ಕುಮಾರ್ ಮಾತ್ರ ಮುಖ್ಯಮಂತ್ರಿ ಅಂತಾ ಟಿವಿ ಚಾನೆಲ್ ವೊಂದರಲ್ಲಿ ಬಿಜೆಪಿ ಮುಖಂಡರು ಹೇಳುವುದನ್ನು ಕೇಳಿದ್ದೇನೆ. ಅದಕ್ಕಾಗಿ ನಿತೀಶ್ ಕುಮಾರ್ ಶಿವಸೇನಾಗೆ ಧನ್ಯವಾದ ಸಲ್ಲಿಸಬೇಕು. ಮಾತು ತಪ್ಪಿದ್ದರೆ ಏನಾಗಲಿದೆ ಎಂಬುದನ್ನು ಮಹಾರಾಷ್ಟ್ರದಲ್ಲಿ ಶಿವಸೇನಾ ತೋರಿಸಿದ್ದು, ಬಿಹಾರದಲ್ಲಿ ಹಾಗೆ ಆಗುವುದಿಲ್ಲ ಎಂದು ಹೇಳಿದ್ದಾರೆ.